K.R.Market: ಬಲಿಪಾಡ್ಯಮಿಯ ದಿನವಾದ ಇಂದು ಕೆ.ಆರ್.ಮಾರುಕಟ್ಟೆಯಲ್ಲಿ ಜನವೋ ಜನ

K.R.Market: ಬಲಿಪಾಡ್ಯಮಿಯ ದಿನವಾದ ಇಂದು ಕೆ.ಆರ್.ಮಾರುಕಟ್ಟೆಯಲ್ಲಿ ಜನವೋ ಜನ

TV9 Web
| Updated By: Rakesh Nayak Manchi

Updated on:Oct 26, 2022 | 8:58 AM

Bangalore: ಇಂದು ದೀಪಾವಳಿಯ ಕೊನೆಯ ದಿನದಂದು ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಪ್ರತಿವರ್ಷದಿಂದ ಈ ದಿನವೂ ಕೆ.ಆರ್.ಮಾರುಕಟ್ಟೆಯಲ್ಲಿ ಖರೀದಿಗಾಗಿ ಜನರು ಮುಗಿಬೀಳುತ್ತಿದ್ದಾರೆ.

ಬೆಂಗಳೂರು: ನಗರದಲ್ಲಿ ದೀಪಾವಳಿ (Deepavali 2022) ಯ ಹಬ್ಬದ ಕೊನೆಯ ದಿನದ ಆಚರಣೆಯಾಗಿರುವ ಬಲಿಪಾಡ್ಯಮಿ (Balipadyami)ಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಕೊರೋನಾ ಹಿನ್ನೆಲೆ ಕಳೆದ ಎರಡು ವರ್ಷಗಳನ್ನು ಬಿಟ್ಟರೆ ಅದಕ್ಕೂ ಹಿಂದಿನ ಎಲ್ಲಾ ವರ್ಷಗಳಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಹಬ್ಬದಂದು ಖರೀದಿಗಾಗಿ ಜನಸಾಗರವೇ ಹರಿದು ಬರುತ್ತಿತ್ತು. ಪ್ರಸ್ತುತ ಕೊರೋನಾ ಹಾವಳಿ ತೀರಾ ಕಡಿಮೆಯಾಗಿರುವುದರಿಂದ ಜನಜಂಗುಳಿ ಮತ್ತೆ ಹೆಚ್ಚಾಗಿದೆ. ಇಂದು ಬಲಿಪಾಡ್ಯಮಿ ಹಿನ್ನೆಲೆ ಖರೀದಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಕೆ.ಆರ್.ಮಾರುಕಟ್ಟೆಗೆ ಆಗಮಿಸಿಸುತ್ತಿದ್ದು, ವಿಧವಿಧವಾದ ಹೂವು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ. ಈ ಮಾರುಕಟ್ಟೆಯಲ್ಲಿ ಹೋಲ್ ಸೇಲ್ ದರದಲ್ಲಿ ಹೂವು ಸಿಗುವುದರಿಂದ ಭಾರೀ ಸಂಖ್ಯೆಯಲ್ಲಿ ಜನರು ಹೂವಿನ ಖರೀದಿಗೆ ಆಗಮಿಸುತ್ತಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Oct 26, 2022 08:58 AM