ಹಾಸನಾಂಬೆಯ ದರ್ಶನಕ್ಕೆ ಬಂದ ಸಿಟಿ ರಸ್ತೆ ಬದಿ ಕುಳಿತು ಗಿಣಿಶಾಸ್ತ್ರದವನಿಂದ ಭವಿಷ್ಯ ಕೇಳಿಸಿಕೊಂಡರು!

ಹಾಸನಾಂಬೆಯ ದರ್ಶನಕ್ಕೆ ಬಂದ ಸಿಟಿ ರಸ್ತೆ ಬದಿ ಕುಳಿತು ಗಿಣಿಶಾಸ್ತ್ರದವನಿಂದ ಭವಿಷ್ಯ ಕೇಳಿಸಿಕೊಂಡರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 26, 2022 | 2:34 PM

ರಾಯಚೂರಿನ ಮಾನ್ವಿಯವನಾಗಿರುವ ಜ್ಯೋತಿಷಿಗೆ ರವಿ ಅವರು ಯಾರೆಂದು ಗೊತ್ತಿತ್ತೋ ಇಲ್ವೋ? ಅನ್ನ ಬಟ್ಟೆಗೆ ಏನೂ ತೊಂದರೆ ಇಲ್ಲ, ತಿಥಿ ಊಟಕ್ಕೆ ಹೋಗಬೇಡಿ ಅಂತೆಲ್ಲ ಹೇಳಲು ಶುರುವಿಟ್ಟುಕೊಳ್ಳುತ್ತಾನೆ.

ಹಾಸನ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಅವರಿಗೆ ಗಿಣಿ ಶಾಸ್ತ್ರದಲ್ಲಿ ಅಪಾರ ನಂಬಿಕೆ ಇರುವಂತಿದೆ ಮಾರಾಯ್ರೇ. ಹಾಸನಾಂಬೆ ದರ್ಶನೋತ್ಸವದ (Hasanambe Darshanotsav) ಕೊನೆಯ ದಿನವಾಗಿದ್ದ ಇಂದು ಅವರು ಹಾಸನಾಂಬೆ ದರ್ಶನ ಪಡೆಯಲು ಅವರು ಹಾಸನಕ್ಕೆ ಆಗಮಿಸಿದ್ದರು. ರಸ್ತೆ ಬದಿಯಲ್ಲಿ ಗಿಣಿಶಾಸ್ತ್ರ ಹೇಳುವ ಜ್ಯೋತಿಷಿಯನ್ನು ಕಂಡ ಕೂಡಲೇ ತಮ್ಮ ಅಡ್ಡಪಂಚೆಯಿಂದ ದುಡ್ಡು ತೆಗೆದು ಕುಕ್ಕರುಗಾಲಲ್ಲಿ ಅವನ ಮುಂದೆ ಕೂರುತ್ತಾರೆ. ರಾಯಚೂರಿನ (Raichur) ಮಾನ್ವಿಯವನಾಗಿರುವ ಜ್ಯೋತಿಷಿಗೆ ರವಿ ಅವರು ಯಾರೆಂದು ಗೊತ್ತಿತ್ತೋ ಇಲ್ವೋ? ಅನ್ನ ಬಟ್ಟೆಗೆ ಏನೂ ತೊಂದರೆ ಇಲ್ಲ, ತಿಥಿ ಊಟಕ್ಕೆ ಹೋಗಬೇಡಿ ಅಂತೆಲ್ಲ ಹೇಳಲು ಶುರುವಿಟ್ಟುಕೊಳ್ಳುತ್ತಾನೆ.