ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
ನಟ ಧನ್ವೀರ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ವಕೀಲ ಪ್ರಶಾಂತ್ ಮೆಥಲ್ ಅವರು ದೂರು ನೀಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9 ಜೊತೆ ಪ್ರಶಾಂತ್ ಮೆಥಲ್ ಮಾತನಾಡಿದ್ದಾರೆ.
ನಟ ಧನ್ವೀರ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ವಕೀಲ ಪ್ರಶಾಂತ್ ಮೆಥಲ್ ಅವರು ದೂರು ನೀಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9 ಜೊತೆ ಪ್ರಶಾಂತ್ ಮೆಥಲ್ ಮಾತನಾಡಿದ್ದಾರೆ. ‘ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವೆ ಕಾನೂನು ಬಾಹಿರವಾಗಿ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿದೆ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ದೂರು ನೀಡಿದ್ದೇನೆ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. 2 ಲಕ್ಷ ರೂಪಾಯಿ ಮೇಲೆ ನಗದು ವ್ಯವಹಾರ ಮಾಡುವಂತಿಲ್ಲ. ನಟ ದರ್ಶನ್, ವಿಜಯಲಕ್ಷ್ಮಿ, ಧನ್ವೀರ್ ಮೇಲೆ ನಮಗೆ ಯಾವುದೇ ವೈಯಕ್ತಿಕ ವಿರೋಧಗಳು ಇಲ್ಲ. ನಗದು ವ್ಯವಹಾರ ಕಾನೂನಾತ್ಮಕವಾಗಿ ಇಲ್ಲ ಎಂಬುದಾದರೆ ಅದರ ಬಗ್ಗೆ ತನಿಖೆ ಆಗಲಿ’ ಎಂದು ಪ್ರಶಾಂತ್ ಮೆಥಲ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
