ಬೆಳಗಾವಿ ಅಧಿವೇಶನ: ಕನ್ನಡ ಬಾರದ ಖಾನಾಪುರ ಶಾಸಕ ಹಲಗೇಕರ್ ಸದನದಲ್ಲಿ ಮರಾಠಿಯಲ್ಲಿ ಮಾತಾಡಿದ್ದಕ್ಕೆ ಸಿಟ್ಟಾದ ಲಕ್ಷ್ಮಣ ಸವದಿ
ಹಲಗೇಕರ್, ಅರ್ಧ ಕನ್ನಡ ಅರ್ಧ ಮರಾಠಿಯಲ್ಲಿ ಮಾತಾಡಲಾರಂಭಿಸುತ್ತಾರೆ. ಮರಾಠಿ ಭಾಷಿಕರಿಗೂ ಅವರು ಮಾತಾಡಿದ್ದು ಅರ್ಥವಾಗಿರಲಾರದು. ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರಿಗೆ ಹಲಗೇಕರ್ ಮರಾಠಿಯಲ್ಲಿ ಮಾತಾಡಿದ್ದು ರೊಚ್ಚಿಗೇಳಿಸುತ್ತದೆ. ಅವರಿಗೆ ಕನ್ನಡ ಮಾತಾಡಲು ಬರುತ್ತದೆ, ನನ್ನೊಂದಿಗೆ ಕನ್ನಡದಲ್ಲೇ ಮಾತಾಡುತ್ತಾರೆ ಅನ್ನುತ್ತಾರೆ.
ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಬಿಜೆಪಿ ಶಾಸಕ ವಿಟ್ಠಲ್ ಹಲಗೇಕರ್ (Vithal Halgekar) ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ರಾಜ್ಯದ ವಿಧಾನಸಭೆಗೆ (Assembly) ಜನ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರೂ ಕನ್ನಡ ಬಾರದು! ಅವರು ಇಂದು ಸದನದಲ್ಲಿ ಮಾತಾಡುವಾಗ ತನಗೆ ಕನ್ನಡ ಅಲ್ಪಸ್ವಲ್ಪ ಬರುತ್ತದೆ, ಹಾಗಾಗಿ ಮರಾಠುಯಲ್ಲಿ ಮಾತಾಡಲು ಅವಕಾಶ ನೀಡಬೇಕೆಂದು ಸಭಾಧ್ಯಕ್ಷರಿಗೆ ಮನವಿ ಮಾಡುತ್ತಾರೆ. ಯುಟಿ ಖಾದರ್ (UT Khader), ಅಸ್ಖಲಿತವಾಗಿ ಮಾತಾಡುವ ಭಾಷೆಯಲ್ಲಿ ಮಾತಾಡಿ ಅಂತ ಅನುಮೋದನೆ ನೀಡುತ್ತಾರೆ. ಹಲಗೇಕರ್, ಅರ್ಧ ಕನ್ನಡ ಅರ್ಧ ಮರಾಠಿಯಲ್ಲಿ ಮಾತಾಡಲಾರಂಭಿಸುತ್ತಾರೆ. ಮರಾ ಠಿಭಾಷಿಕರಿಗೂ ಅವರು ಮಾತಾಡಿದ್ದು ಅರ್ಥವಾಗಿರಲಾರದು. ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರಿಗೆ ಹಲಗೇಕರ್ ಮರಾಠಿಯಲ್ಲಿ ಮಾತಾಡಿದ್ದು ರೊಚ್ಚಿಗೇಳಿಸುತ್ತದೆ. ಅವರಿಗೆ ಕನ್ನಡ ಮಾತಾಡಲು ಬರುತ್ತದೆ, ನನ್ನೊಂದಿಗೆ ಕನ್ನಡದಲ್ಲೇ ಮಾತಾಡುತ್ತಾರೆ ಅನ್ನುತ್ತಾರೆ. ಸ್ಪೀಕರ್ ಮಧ್ಯಪ್ರವೇಶಿಸಿ ಅವರಿಗೆ ಸರಿಯೆನಿಸುವ ಭಾಷೆಯಲ್ಲಿ ಮಾತಾಡಲಿ ಬಿಡಿ, ನೀವು ಹಿರಿಯ ಶಾಸಕರಾಗಿ ಹೀಗೆ ಅಡ್ಡಿ ಪಡಿಸಬಾರದು ಅನ್ನುತ್ತಾರೆ. ಕೊನೆಗೆ ಕನ್ನಡದಲ್ಲೇ ಮಾತು ಮುಂದುವರಿಸುವ ಹಲಗೇಕರ್ ಯಾರಿಗೂ ಅರ್ಥವಾಗದ ಹಾಗೆ ವಿಷಯಮಂಡನೆ ಮಾಡಿ ಕುಳಿತುಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ