Adani Impact: ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ ವಿರೋಧ ಪಕ್ಷಗಳ ನಾಯಕರು

|

Updated on: Feb 03, 2023 | 12:19 PM

ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇತರ ವಿರೋಧ ಪಕ್ಷಗಳ ನಾಯಕರು ಇಂದು ದೆಹಲಿಯಲ್ಲಿ ಸಭೆಯೊಂದನ್ನು ನಡೆಸಿದರು.

ದೆಹಲಿ:  ಭಾರತದ ಉದ್ಯಮಿ ಗೌತಮ್ ಆದಾನಿಯ (Gowtham Adani) ವ್ಯವಹಾರಗಳನ್ನು ಕುರಿತು ಅಮೆರಿಕದ ಹಿಂಡೆನ್ ಬರ್ಗ್ ರೀಸರ್ಚ್ ಸಂಸ್ಥೆ ಕೆಲ ಸ್ಫೋಟಕ ಮಾಹಿತಿಗಳನ್ನು ಬಹಿರಂಗಗೊಳಿಸುತ್ತಿದ್ದಂತೆಯೇ ಭಾರತದ ಷೇರು ಮಾರುಕಟ್ಟೆಯಲ್ಲಿ ಹಾಹಾಕಾರ ಶುರುವಾಗಿದೆ. ಅದಾನಿ ಒಡೆತನದ ಕಂಪನಿಗಳ ಷೇರುಗಳು ಮೌಲ್ಯ ಒಂದೇ ಸಮ ಕುಸಿಯುತ್ತಿವೆ. ಭಾರತದ ದೊಡ್ಡ ಸಂಸ್ಥೆಗಳಾದ ಎಲ್ ಐಸಿ (LIC) ಸಾವಿರಾರು ಕೋಟಿ ರೂಪಾಯಿಗಳನ್ನು ಅದಾನಿ ಕಂಪನಿಗಳಲ್ಲಿ ಹೂಡಿದೆ ಮತ್ತು ರಾಷ್ಟ್ರದ ಅತಿದೊಡ್ಡ ಬ್ಯಾಂಕ್ ಎಸ್ ಬಿಐ (SBI) ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸಾಲದ ರೂಪದಲ್ಲಿ ಅದಾನಿಗೆ ನೀಡಿದೆ. ಅದಾನಿ ಸುತ್ತ ಸೃಷ್ಟಿಯಾಗಿರುವ ವಿವಾದಗಳ ಬಗ್ಗೆ ವಿರೋಧ ಪಕ್ಷ ಸಂಸತ್ತಿನಲ್ಲಿ ಚರ್ಚಿಸಬಯಸುತ್ತಿದೆಯಾದರೂ ಸರ್ಕಾರ ಅವಕಾಶ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ಇತರ ವಿರೋಧ ಪಕ್ಷಗಳ ನಾಯಕರು ಇಂದು ದೆಹಲಿಯಲ್ಲಿ ಸಭೆಯೊಂದನ್ನು ನಡೆಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 03, 2023 12:17 PM