Assembly Polls | ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೆ ಬರುವುದು ಖಚಿತ: ಡಿಕೆ ಶಿವಕುಮಾರ್
ಗಮನಿಸಬೇಕಾದ ಅಂಶವೇನೆಂದರೆ, ಎಲ್ಲ ಮೂರು ಪಕ್ಷಗಳು-ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆಯೇರುವ ವಿಶ್ವಾಸ ವ್ಯಕ್ತಪಡಿಸುತ್ತಿವೆ.
ಬೆಂಗಳೂರು: ರಾಜ್ಯ ವಿಧಾನ ಸಭೆ ಚುನಾವಣೆಗಳು (assembly polls) ಹತ್ತಿರವಾಗುತ್ತಿದಂತೆಯೇ ರಾಜಕೀಯ ಪಕ್ಷಗಳ ಲೆಕ್ಕಾಚಾರಗಳು ಆರಂಭಗೊಂಡಿವೆ. ಬೆಂಗಳೂರಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡಿದ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar), ಇನ್ನು 50 ದಿನಗಳ ನಂತರ ಬಿಜೆಪಿ ಸರ್ಕಾರದಲ್ಲಿರುವುದಿಲ್ಲ, ತಾವು ಈಗಾಗಲೇ ಮೂರು ಬಾರಿ ಸಮೀಕ್ಷೆ ಮಾಡಿಸಿದ್ದು ಕಾಂಗ್ರೆಸ್ 160 ಸ್ಥಾನಗಳಲ್ಲಿ ಗೆಲ್ಲಬಹುದಾದ ಸೂಚನೆಗಳು ಸಿಕ್ಕಿವೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು 136 ಸ್ಥಾನಗಳನ್ನು ಖಚಿತವಾಗಿ ಗೆಲ್ಲುವ ವಿಶ್ವಾಸ ನಮಗಿದೆ ಎಂದು ಹೇಳಿದರು. ಗಮನಿಸಬೇಕಾದ ಅಂಶವೇನೆಂದರೆ, ಎಲ್ಲ ಮೂರು ಪಕ್ಷಗಳು-ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆಯೇರುವ ವಿಶ್ವಾಸ ವ್ಯಕ್ತಪಡಿಸುತ್ತಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ