ಬಾಲವೇ ನಾಯಿಯನ್ನು ಅಲ್ಲಾಡಿಸಿದ್ರೆ ಹೇಗೆ? ನಾಯಕತ್ವ ಬದಲಾವಣೆ ಪ್ರಶ್ನೆಗೆ ಹೀಗ್ಯಾಕಂದ್ರು ಸಚಿವ ಮಹದೇವಪ್ಪ!

Edited By:

Updated on: Feb 16, 2026 | 2:11 PM

ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ಸಚಿವ ಎಚ್​​ಸಿ ಮಹದೇವಪ್ಪ ಅವರು ಬೀದಿನಾಯಿ ವಿಷಯವನ್ನು ಪ್ರಸ್ತಾಪಿಸಿ ಅಚ್ಚರಿ ಮೂಡಿಸಿದ್ದಾರೆ. ಬೀದಿನಾಯಿಗಳನ್ನು ಹಿಡಿಯಲು ಹೈಕೋರ್ಟ್ ಆದೇಶಿಸಿದೆ ಎಂದು ಹೇಳಿದ ಅವರು, ಬಾಲವೇ ನಾಯಿಯನ್ನು ಅಲ್ಲಾಡಿಸುವುದು ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಇದು ಪಕ್ಷದ ಆಂತರಿಕ ಭಿನ್ನಮತೀಯರಿಗೆ ಪರೋಕ್ಷವಾಗಿ ನೀಡಿದ ಎಚ್ಚರಿಕೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಬೆಂಗಳೂರು, ಫೆಬ್ರವರಿ 16: ಹಿರಿಯ ಸಚಿವ ಹೆಚ್​ಸಿ ಮಹದೇವಪ್ಪ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲ ಮತ್ತು ಹೈಕಮಾಂಡ್ ಮಧ್ಯಪ್ರವೇಶದ ಅಗತ್ಯತೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಮಹದೇವಪ್ಪ ಅವರು ಅದಕ್ಕೆ ನೇರವಾಗಿ ಉತ್ತರಿಸದೆ ಬೀದಿನಾಯಿ ವಿಷಯವನ್ನು ಪ್ರಸ್ತಾಪಿಸಿದರು. ‘ನಾಯಕತ್ವದ ಚರ್ಚೆ ಎಲ್ಲಿದೆ? ಹೈಕೋರ್ಟ್ ಪದೇ ಪದೇ ಬೀದಿನಾಯಿಗಳನ್ನೆಲ್ಲ ಹಿಡಿದು ಒಳಗಾಕಿ ಎಂದು ಹೇಳುತ್ತಿದೆ’ ಎಂದರು. ಈ ಹೇಳಿಕೆ ವಿವಾದಕ್ಕೆ ಗುರಿಯಾಗಬಹುದು ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ಸ್ಪಷ್ಟನೆ ನೀಡಲು ಮುಂದಾದ ಮಹದೇವಪ್ಪ, ತಾವು ಹೈಕೋರ್ಟ್ ಹೇಳಿದ್ದನ್ನಷ್ಟೇ ಹೇಳಿದ್ದು. ಯಾವುದೇ ಅನಗತ್ಯ ಗೊಂದಲ ಸೃಷ್ಟಿಸಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು. ಆದಾಗ್ಯೂ, ಅವರ ಈ ಮಾತುಗಳು ಆಡಳಿತಾರೂಢ ಪಕ್ಷದೊಳಗಿನ ಅಸಮಾಧಾನವನ್ನು ಪ್ರತಿಬಿಂಬಿಸುತ್ತಿವೆ ಎನ್ನಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ