Sign In

By signing in or creating an account, you agree with Associated Broadcasting Company's Terms & Conditions and Privacy Policy.

Leelavathi No More: ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು ಅಂತ ಆಕ್ರಂದಿಸಿದ್ದು ಲೀಲಮ್ಮನ ಒಬ್ಬನೇ ಮಗ ವಿನೋದ್ ರಾಜ್

Leelavathi No More: ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು ಅಂತ ಆಕ್ರಂದಿಸಿದ್ದು ಲೀಲಮ್ಮನ ಒಬ್ಬನೇ ಮಗ ವಿನೋದ್ ರಾಜ್

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 08, 2023 | 7:42 PM

Leelavathi No More: ಬಾಲನಟಿಯಾಗಿ ಚಿತ್ರರರಂಗಕ್ಕೆ ಕಾಲಿಟ್ಟ ಲೀಲಾವತಿ ಕನ್ನಡದ ಎಲ್ಲ ಮೇರು ನಟರೊಂದಿಗೆ ನಟಿಸಿದರು. ಅವರೆಷ್ಟು ಜನಪ್ರಿಯ ಮತ್ತು ಬೇಡಿಕೆಯ ನಟಿಯಾಗಿದ್ದರೆಂದರೆ 60 ದಶಕದಲ್ಲಿ ಆಗಿನ ನಾಯಕ ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರಂತೆ. ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಒಂದು ತುಳು ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿದ್ದರು, ನಾಡಿನ ಅನೇಕ ಗಣ್ಯರು ಲೀಲಾವತಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

ನೆಲಮಂಗಲ: 86ರ ಇಳಿವಯಸ್ಸಿನಲ್ಲೂ ಅಪಾರವಾಗಿ ದುರ್ಬಲ ಮತ್ತು ನಿತ್ರಾಣಗೊಂಡಿದ್ದ ದೇಹದೊಂದಿಗೆ ಸಾವಿನ ಜೊತೆ ಹೋರಾಡಿದ ಕನ್ನಡ ಚಿತ್ರರಂಗದ ಮಹಾನ್ ನಟಿಯಲ್ಲಿ ಒಬ್ಬರಾಗಿದ್ದ ಲೀಲಾವತಿ (Leelavathi) ತಮ್ಮ ಬದುಕಿನ ಸಿನಿಮಾಗೆ ತೆರೆ ಎಳೆದಿದ್ದಾರೆ. ಕಳೆದೊಂದು ವಾರದಿಂದ ಅವರಿಗೆ ನೆಲಮಂಗಲದ (Nelamangala) ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಅವರನ್ನು ಉಳಿಸಿಕೊಳ್ಳಲು ಮಗ ವಿನೋದ್ ರಾಜ್ (Vinod Raj) ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಲೀಲಾವತಿ ಅಮ್ಮನ ಒಬ್ಬನೇ ಮಗ ತನ್ನ ತಾಯಿಯನ್ನು ಒಂದು ಚಿಕ್ಕಮಗುವಿನಂತೆ ನೋಡಿಕೊಂಡಿದ್ದನ್ನು ಕನ್ನಡಿಗರೆಲ್ಲ ನೋಡಿದ್ದಾರೆ. ಲೀಲಾವತಿಯವರು ಕೊನೆಯುಸಿರೆಳೆದ ಬಳಿಕ ವಿನೋದ್ ರಾಜ್ ಚಿಕ್ಕ ಮಗುವಿನಂತೆ ಅತ್ತರು. ಅವರ ಅಳು ನಿಲ್ಲಲ್ಲ. ಒಬ್ಬರನ್ನೊಬ್ಬರು ಬಿಟ್ಟಿರಲಾಗದ ತಾಯಿ-ಮಗನ ಜೋಡಿ ಇದು. ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಳು ಅಂತ ಅವರು ಗೋಳಿಡುತ್ತಿದ್ದ ದೃಶ್ಯ ಅಲ್ಲಿದ್ದ ಪೊಲೀಸರ ಕಣ್ಣುಗಳನ್ನೂ ಒದ್ದೆಯಾಗಿಸಿತ್ತು. ಅಪಾರ ದುಃಖದಲ್ಲಿರುವ ವಿನೋದ್ ಗೆ ಮಾತಾಡಲು ಸಾಧ್ಯವಾಗುತ್ತಿಲ್ಲ. ಸ್ನೇಹಿತರು, ಪೊಲೀಸರು ಮತ್ತು ಹಿತೈಶಿಗಳು ಅವರನ್ನು ಸಂತೈಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 08, 2023 07:35 PM