Belagavi: ಬಾಲ್ಯದ ಕ್ರೀಡೆಗಳನ್ನು ಆಡಿ ಖುಷಿಪಟ್ಟ ಸ್ಪೀಕರ್ ಯು.ಟಿ. ಖಾದರ್
ಚಿನ್ನಿ ದಾಂಡು ಸೇರಿ ಕೆಲ ಬಾಲ್ಯದ ಕ್ರೀಡೆಗಳನ್ನು ಆಡಿ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಖುಷಿ ಪಟ್ಟ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ. ನಗರದ ಟಿಳಕವಾಡಿ ಲೀಲೆ ಮೈದಾನದಲ್ಲಿ ಶಾಸಕ ಅಭಯ್ ಪಾಟೀಲ್ ಆಯೋಜಿಸಿದ್ದ ಬಾಲ್ಯದ ಗ್ರಾಮೀಣ ಕ್ರೀಡೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ತಾವೂ ವಿವಿಧ ಆಟಗಳಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.
ಬೆಳಗಾವಿ, ಡಿಸೆಂಬರ್ 11: ಬೆಳಗಾವಿ ನಗರದ ಟಿಳಕವಾಡಿ ಲೀಲೆ ಮೈದಾನದಲ್ಲಿ ಶಾಸಕ ಅಭಯ್ ಪಾಟೀಲ್ ಆಯೋಜಿಸಿದ್ದ ಬಾಲ್ಯದ ಗ್ರಾಮೀಣ ಕ್ರೀಡೆಗಳ ಕಾರ್ಯಕ್ರಮಕ್ಕೆ ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಚಾಲನೆ ನೀಡಿದ್ದಾರೆ. ಗೋಲಿ ಆಡುವ ಮೂಲಕ ಸ್ಪೀಕರ್ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಿದ್ದು, ಚಿನ್ನಿ ದಾಂಡು ಸೇರಿ ಕೆಲ ಕ್ರೀಡೆಗಳನ್ನು ತಾವೇ ಆಡಿ ಸಂತಸ ಪಟ್ಟರು. ಇತ್ತೀಚೆಗೆ ಇಂತಹ ಕ್ರೀಡೆಗಳು ಮರೆಯಾಗುತ್ತಿರುವ ಹಿನ್ನಲೆ ಯುವ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋಲಿ, ರಿಂಗ್ ಆಟ, ಚಿನ್ನಿ ದಾಂಡು, ಲಗೋರಿ ಸೇರಿದಂತೆ ವಿವಿಧ ಬಾಲ್ಯದ ಕ್ರೀಡೆಗಳನ್ನು ಆಡಿ ನೆರೆದಿದ್ದವರು ಖುಷಿ ಪಟ್ಟರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಮದ್ಯದ ಅಮಲಲ್ಲಿ ಫುಟ್ಪಾತ್ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
