ಭದ್ರಾವತಿಯಲ್ಲಿ ಪ್ರತ್ಯಕ್ಷವಾಗಿ ಮಾಯವಾಯಿತೊಂದು ಚಿರತೆ, ಅರಣ್ಯ ಸಿಬ್ಬಂದಿ ಸೆರೆಹಿಡಿಯಲು ವಿಫಲ
ಅದನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಅಲ್ಲಿಗೆ ಬಂದಿರುವರಾದರೂ ವನ್ಯಜೀವಿ ಕಾಣುತ್ತಿಲ್ಲ. ಎಲ್ಲಿ ಮಾಯವಾಯಿತೋ? ಜನ ಮಾತ್ರ ಅದನ್ನು ನೋಡಲು ಜಮಾಯಿಸುತ್ತಲೇ ಇದ್ದಾರೆ.
Bhadravati: ನಮ್ಮ ರಾಜ್ಯದ ಜನವಸತಿ (human habitat) ಪ್ರದೇಶಗಳಲ್ಲಿ ಪಕ್ಕದ ಕಾಡುಗಳಿಂದ ಚಿರತೆಗಳು ಬರೋದು ಜನರಲ್ಲಿ ಭೀತಿ ಹುಟ್ಟಿಸುವುದು, ಆಡು, ಕುರಿಗಳನ್ನು (sheep) ಎತ್ತಿಕೊಂದು ಹೋಗೋದು ಮತ್ತು ಆಗಾಗ್ಗೆ ಮನುಷ್ಯರ ಮೇಲೆ ಹಲ್ಲೆ ಮಾಡುವ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಬುಧವಾರ ಬೆಳಗ್ಗೆ ಪೇಪರ್ ಟೌನ್ ಭದ್ರಾವತಿಯ (Bhadravati) ವಿಎಸ್ ಐ ಎಲ್ ಆಸ್ಪತ್ರೆ ಪಕ್ಕದಲ್ಲಿರುವ ಕ್ವಾರ್ಟರ್ಸ್ನಲ್ಲಿ ಚಿರತೆಯೊಂದು ಕಾಣಿಸಿಕೊಂಡು ಮಾಯವಾಗಿದೆ. ಚಿರತೆಯನ್ನು ವಿಡಿಯೋನಲ್ಲಿ ನೋಡಬಹುದು. ಅದನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಅಲ್ಲಿಗೆ ಬಂದಿರುವರಾದರೂ ವನ್ಯಜೀವಿ ಕಾಣುತ್ತಿಲ್ಲ. ಎಲ್ಲಿ ಮಾಯವಾಯಿತೋ? ಜನ ಮಾತ್ರ ಅದನ್ನು ನೋಡಲು ಜಮಾಯಿಸುತ್ತಲೇ ಇದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.