ರಾಮನಗರದಲ್ಲಿ ಮನೆ ರೂಮಿನೊಳಗೆ ಬಂಧಿಯಾದ ಚಿರತೆ! ವಿಡಿಯೋ ಇದೆ
ಚಿರತೆ ಬರುವುದನ್ನು ಗಮನಿಸಿದ ಮನೆಯವರು ಬಾಗಿಲನ್ನು ಲಾಕ್ ಮಾಡುತ್ತಾರೆ. ಹೀಗಾಗಿ ಚಿರತೆ ರೂಮ್ನಲ್ಲಿ ಬಂಧಿಯಾಗಿತ್ತು. ನಂತರ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ರಾಮನಗರ: ಚಿರತೆ ಮನೆಗೆ ನುಗ್ಗಿದ ಘಟನೆ ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ನಡೆದಿದೆ. ರೇಣುಕಯ್ಯ ಎಂಬುವರ ಮನೆಗೆ ತಡರಾತ್ರಿ ಚಿರತೆ ನುಗ್ಗಿತ್ತು. ಇದನ್ನು ಗಮನಿಸಿದ ಮನೆಯವರು ಮನೆಯ ಬಾಗಿಲು ಹಾಕಿ ಸುರಕ್ಷಿತವಾಗಿ ಹೊರಬಂದಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡಿ ಅರಣ್ಯ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಪಶು ವೈದ್ಯರು ಚಿರತೆಯನ್ನು ಸೆರೆಹಿಡಿದಿದ್ದಾರೆ. ಚಿರತೆ ಬರುವುದನ್ನು ಗಮನಿಸಿದ ಮನೆಯವರು ಬಾಗಿಲನ್ನು ಲಾಕ್ ಮಾಡುತ್ತಾರೆ. ಹೀಗಾಗಿ ಚಿರತೆ ರೂಮ್ನಲ್ಲಿ ಬಂಧಿಯಾಗಿತ್ತು. ನಂತರ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
Published on: Oct 24, 2021 01:02 PM