ವಿರೋಧ ಪಕ್ಷದ ನಾಯಕರು ಹಿಟ್ ಅಂಡ್ ರನ್ ಮಾಡೋದು ಬೇಡ, ದಾಖಲೆಗಳನ್ನು ತನಿಖೆಗೆ ಒಪ್ಪಿಸಲಿ: ಪ್ರಿಯಾಂಕ್ ಖರ್ಗೆ, ಸಚಿವ

ವಿರೋಧ ಪಕ್ಷದ ನಾಯಕರು ಹಿಟ್ ಅಂಡ್ ರನ್ ಮಾಡೋದು ಬೇಡ, ದಾಖಲೆಗಳನ್ನು ತನಿಖೆಗೆ ಒಪ್ಪಿಸಲಿ: ಪ್ರಿಯಾಂಕ್ ಖರ್ಗೆ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 10, 2024 | 12:40 PM

ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನಾಗಮೋಹನ ದಾಸ್ ಸಮಿತಿ ರಚನೆ ಮಾಡಿದೆ, ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಲಾಗಿದೆ, ಎಫ್ ಐ ಆರ್ ಗಳಾಗಿವೆ ಮತ್ತು ಕೆಲ ಅರೆಸ್ಟ್ ಗಳು ಸಹ ಆಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಬಳಿ ದಾಖಲೆಗಳಿದ್ದರೆ ಸಮಿತಿಗೆ ನೀಡಲಿ ಎಂದು ಖರ್ಗೆ ಹೇಳಿದರು.

ಕಲಬುರಗಿ: ಇಂದು ಕಲಬುರಗಿಯಲ್ಲಿ ಪುನಃ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge); ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹಿಟ್ ಅಂಡ್ ರನ್ (hit and run) ಮಾಡೋದು ಬಿಟ್ಟು ತಮ್ಮ ಸರಕಾರ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ದಾಖಲೆಗಳಿದ್ದರೆ ಅವುಗಳನ್ನು ನಾಗಮೋಹನ್ ದಾಸ್ ಸಮಿತಿಗೆ (HN Nagamohan Das Commission) ನೀಡಲಿ, ತನಿಖೆ ಆಗುತ್ತದೆ ಎಂದು ಹೇಳಿದರು. ಎಲ್ಲ ಅರೋಪಗಳ ತನಿಖೆ ನಡೆಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ ಎಂದ ಖರ್ಗೆ ಹೇಳಿದರು.

ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನಾಗಮೋಹನ ದಾಸ್ ಸಮಿತಿ ರಚನೆ ಮಾಡಿದೆ, ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಲಾಗಿದೆ, ಎಫ್ ಐ ಆರ್ ಗಳಾಗಿವೆ ಮತ್ತು ಕೆಲ ಅರೆಸ್ಟ್ ಗಳು ಸಹ ಆಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಬಳಿ ದಾಖಲೆಗಳಿದ್ದರೆ ಸಮಿತಿಗೆ ನೀಡಲಿ ಎಂದು ಖರ್ಗೆ ಹೇಳಿದರು.

ತಮ್ಮ ಸರ್ಕಾರ ವಿಧಾನ ಸೌಧವನ್ನು ಪ್ರಜಾಸೌಧವಾಗಿ ಉಳಿಸಿಕೊಂಡಿದೆಯೇ ಹೊರತು ವ್ಯಾಪಾರ ಸೌಧವಾಗಿ ಪರಿವರ್ತಿಸಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ