ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಬೆಂಗಳೂರಿನಲ್ಲಿ ರವಿವಾರಂದು ಹಿಜಾಬ್ (hijab) ಹಾಕದಿದ್ದರೆ ರೇಪ್ಗಳಾಗುತ್ತವೆ, ಭಾರತದಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಹಿಜಾಬ್ ಧರಿಸದಿರುವುದೇ ಕಾರಣ ಆಂತ ಹೇಳಿ ಸೋವಾವಾರ ಹುಬ್ಬಳ್ಳಿಯಲ್ಲಿ ನಾನು ಹಾಗೆ ಹೇಳಿಲ್ಲ, ಅದನ್ನು ತಪ್ಪಾಗಿ ಗ್ರಹಿಸಲಾಗಿದೆ ಅಂತ ಯು-ಟರ್ನ್ ತೆಗೆದುಕೊಂಡ ಬಳಿಕ ತಾವಾಡಿದ ಮಾತು ಸರಿಯಲ್ಲ ಅಂತ ಗೊತ್ತಾಗಿ ಕ್ಷಮೆಯನ್ನೂ ಕೇಳಿದರು. ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕರೇ ಖಂಡಿಸಿದರು. ಬಿಡಿ ಅದು ಬೇರೆ ವಿಷಯ. ರಾಜ್ಯ ಬಿಜೆಪಿ ಘಟಕದ ವಕ್ತಾರೆ ಮಾಳವಿಕಾ ಅವಿನಾಶ್ (Malavika Avinash) ಅವರನ್ನು ಜಮೀರ್ ಕ್ಷಮೆ ಕೇಳಿರುವ ಕುರಿತು ಮಾಧ್ಯಮದವರು ಕೇಳಿದಾಗ ಕ್ಷಮೆ ಕೇಳುವುದರಲ್ಲಿ ಅರ್ಥವಿಲ್ಲ, ಅವರ ಮಾನಸಿಕತೆ ಬದಲಾಗಬೇಕು ಎಂದು ಹೇಳಿದರು.
ಕ್ಷಮೆ ಕೇಳುವುದರಿಂದ ಜಮೀರ್ ಅವರ ಮಾನಸಿಕತೆ ಬದಲಾಗಲಾರದು ಮೊದಲು ಅದು ಬದಲಾಗಬೇಕು. ಎಲ್ಲಕ್ಕಿಂತ ಮೊದಲು ಅವರು ತಮ್ಮ ಬುದ್ಧಿಗೆ ಹಾಕಿಕೊಂಡಿರುವ ಹಿಜಾಬ್ ತೆಗೆದು ಹಾಕಬೇಕು. ಅವರು ಸಲಹೆ ನೀಡಬೇಕಿರುವುದು ಪುರುಷರಿಗೆ, ಮಹಿಳೆಯರಿಗಲ್ಲ. ಹೆಣ್ಣನ್ನು ಅವರು ಭೋಗದ ವಸ್ತು ಅಂದುಕೊಂಡಿದ್ದಾರೆ, ಆ ಮಾನಸಿಕತೆ ಬದಲಾಗಬೇಕು ಎಂದು ಮಾಳವಿಕಾ ಹೇಳಿದರು.
ಕಾಂಗ್ರೆಸ್ ಶಾಸಕ ತಮ್ಮ ಬುದ್ಧಿ ಸರಿಮಾಡಿಕೊಂಡು ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು ಎಂಬ ಸಂಗತಿಯನ್ನು ಮೊದಲು ತಾವು ಅರಿತುಕೊಂಡು ಬಳಿಕ ತಮ್ಮ ಸುತ್ತಮುತ್ತ ಇರುವ ಗಂಡಸರಿಗೆ ಸಲಹೆ ನೀಡಲಿ ಎಂದು ಮಾಳವಿಕಾ ಖಾರವಾಗಿ ಹೇಳಿದರು.
ಇದನ್ನೂ ಓದಿ: ಹಿಜಾಬ್ ಬಗ್ಗೆ ಕೋರ್ಟ್ ಆದೇಶ ಮಕ್ಕಳಿಗೆ ಅರ್ಥವಾಗುವುದಿಲ್ಲ, ಶಿಕ್ಷಕರು ಅದನ್ನು ವಿವರಿಸಬೇಕು ಎನ್ನುತ್ತಾರೆ ಮೈಸೂರು ಡಿಡಿಪಿಐ