ಸುಳ್ಳು ಹೇಳಿದರೆ ಮರೆತುಹೋಗುತ್ತದೆ, ಆದರೆ ನಮ್ಮ ಕಣ್ಣಮುಂದೆ ನಡೆದಿದ್ದನ್ನು ನಾವು ಹೇಳುತ್ತಿದ್ದೇವೆ: ಯಶೋಧ, ಅಂಜಲಿ ತಂಗಿ

|

Updated on: May 23, 2024 | 6:21 PM

ಕೊಲೆಗೆ ಬಳಸಿದ ಚಾಕುವನ್ನು ಅರೋಪಿ ವಿಶ್ವ ಮನೆಯಲ್ಲೇ ಬಿಸಾಡಿದ್ದನಂತಲ್ಲ ಎಂದು ಅದನ್ನು ಹುಡುಕಿದರು, ಅದನ್ನು ಅವನು ಮನೇಲಿ ಬಿಸಾಡಿಲ್ಲ ಎಂದು ತಾವು ಹೇಳಿರುವುದಾಗಿ ಯಶೋಧ ಹೇಳಿದಳು. ಕೊಲೆಯ ಬಗ್ಗೆ ಅವರು ಕೇಳಿದಾಗ ವಿಶ್ವ ನಮ್ಮಕ್ಕ ಅಂಜಲಿಯನ್ನು ಮದುವೆಯಾಗುವಂತೆ ಹೇಳಿದಾಗ ಅಕ್ಕ ಸೇರಿದಂತೆ ಮನೆಯಲ್ಲಿ ಎಲ್ಲರೂ ನಿರಾಕರಿಸಿದರು. ಅಗಲೇ ಅವನು ಚಾಕುನಿಂದ ಅಕ್ಕನನ್ನು ತಿವಿದು ಕೊಂದ ಅಂತ ಹೇಳಿದ್ದೇವೆ ಎಂದು ಯಶೋಧ ಹೇಳಿದಳು.

ಹುಬ್ಬಳ್ಳಿ: ತನ್ನಕ್ಕ ಅಂಜಲಿ ಅಂಬಿಗೇರ್ (Anjali Ambiger) ಪ್ರಕರಣವನ್ನು ತನಿಖೆ ಮಾಡುತ್ತಿರುವ ಸಿಐಡಿ ಅಧಿಕಾರಿಗಳು ಆಡುವ ಮಾತುಗಳ ಮೇಲೆ ಸ್ವಲ್ಪ ವಿಶ್ವಾಸ ಬಂದಿದೆ, ಆಕೆಯನ್ನು ಚಾಕುನಿಂದ ಕೊಂದ ಹಂತಕನನ್ನು ಎನ್ಕೌಂಟರ್ (encounter) ಮಾಡಿದರೆ ಇಲ್ಲವೇ ಗಲ್ಲಿಗೇರುವಂತೆ ಮಾಡಿದರೆ ಪೂರ್ತಿ ನಂಬಿಕೆ ಬರುತ್ತದೆ ಎಂದು ಅಂಜಲಿಯ ತಂಗಿ ಯಶೋಧ ಅಂಬಿಗೇರ್ (Yashoda Ambiger) ಇಂದು ಮಾಧ್ಯಮದವರಿಗೆ ಹೇಳಿದಳು. ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು ಮನೆಗೆ ಬಂದಿದ್ದರು, ಕೊಲೆಗೆ ಬಳಸಿದ ಚಾಕುವನ್ನು ಅರೋಪಿ ವಿಶ್ವ ಮನೆಯಲ್ಲೇ ಬಿಸಾಡಿದ್ದನಂತಲ್ಲ ಎಂದು ಅದನ್ನು ಹುಡುಕಿದರು, ಅದನ್ನು ಅವನು ಮನೇಲಿ ಬಿಸಾಡಿಲ್ಲ ಎಂದು ತಾವು ಹೇಳಿರುವುದಾಗಿ ಯಶೋಧ ಹೇಳಿದಳು. ಕೊಲೆಯ ಬಗ್ಗೆ ಅವರು ಕೇಳಿದಾಗ ವಿಶ್ವ ನಮ್ಮಕ್ಕ ಅಂಜಲಿಯನ್ನು ಮದುವೆಯಾಗುವಂತೆ ಹೇಳಿದಾಗ ಅಕ್ಕ ಸೇರಿದಂತೆ ಮನೆಯಲ್ಲಿ ಎಲ್ಲರೂ ನಿರಾಕರಿಸಿದರು. ಅಗಲೇ ಅವನು ಚಾಕುನಿಂದ ಅಕ್ಕನನ್ನು ತಿವಿದು ಕೊಂದ ಅಂತ ಹೇಳಿದ್ದೇವೆ ಎಂದು ಯಶೋಧ ಹೇಳಿದಳು. ಸುಳ್ಳು ಹೇಳಬಾರದು ಸತ್ಯವನ್ನೇ ಹೇಳಬೇಕು ಅಂತ ಅಧಿಕಾರಿಗಳು ಹೇಳಿದಾಗ, ನಮ್ಮ ಕಣ್ಣೆದುರು ನಡೆದಿದ್ದನ್ನು ನಾವು ಹೇಳುತ್ತಿದ್ದೇವೆ, ಸುಳ್ಳಾಡಿದರೆ ಆಡಿದ ಮಾತು ಮರೆತುಹೋಗುತ್ತದೆ. ಆದರೆ ನಾವು ಮೊದಲ ದಿನದಿಂದ ಮತ್ತು ಕೇಳಿದವರಿಗೆಲ್ಲ ಇದನ್ನೇ ಅಂದರೆ ಸತ್ಯವನ್ನೇ ಹೇಳಿದ್ದೇವೆ ಎಂದು ಯಶೋಧ ಹೇಳಿದಳು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಂಜಲಿ ತಂಗಿ ಜೀವ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದು ಗೊತ್ತಾಗುತ್ತಿದ್ದಂತೆಯೇ ಹುಬ್ಬಳ್ಳಿಗೆ ಧಾವಿಸಿದ ಪರಮೇಶ್ವರ್

Follow us on