‘ಏನೇ ಆದರೂ ಮುಂದೆ ಸಾಗಲೇಬೇಕು’; ಜೀವನದಲ್ಲಿ ತಾವು ಹಾಕಿಕೊಂಡ ನಿಯಮ ತಿಳಿಸಿದ ಶಿವಣ್ಣ

Updated on: Jul 13, 2023 | 11:00 AM

ಶಿವರಾಜ್​ಕುಮಾರ್ ಜೀವನದಲ್ಲಿ ಅನೇಕ ಏರುಪೇರುಗಳು ಉಂಟಾಗಿವೆ. ಆದರೆ, ನೋವುಗಳನ್ನು ನುಂಗಿ ಮುಂದೆ ಸಾಗುತ್ತಿದ್ದಾರೆ. ಈ ಬಗ್ಗೆ ಶಿವರಾಜ್​ಕುಮಾರ್ ಮಾತನಾಡಿದ್ದಾರೆ.

ಶಿವರಾಜ್​ಕುಮಾರ್ ಜೀವನದಲ್ಲಿ ಅನೇಕ ಏರುಪೇರುಗಳು ಉಂಟಾಗಿವೆ. ಆದರೆ, ನೋವುಗಳನ್ನು ನುಂಗಿ ಮುಂದೆ ಸಾಗುತ್ತಿದ್ದಾರೆ. ಈ ಬಗ್ಗೆ ಶಿವರಾಜ್​ಕುಮಾರ್ (Shivarajkumar) ಮಾತನಾಡಿದ್ದಾರೆ. ‘ಎಲ್ಲವನ್ನೂ ಸುಲಭದಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಬಯಸುವವನು ನಾನು. ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಸಿನಿಮಾದಲ್ಲಿ ಎಲ್ಲವೂ ಒಂದಕ್ಕೊಂದು ಕನೆಕ್ಷನ್ ಇದೆ. ಒಂದು ಕೆಲಸ ನಿಂತರೂ ಎಲ್ಲವೂ ನಿಲ್ಲುತ್ತದೆ. ಏನೇ ಆದರೂ ನಾವು ಮುಂದೆ ಸಾಗಲೇಬೇಕು. ವಯಸ್ಸಾದಮೇಲೆ ಕೋಪ ಜಾಸ್ತಿ ಬರುತ್ತಿದೆ. ಅದನ್ನು ನಿಯಂತ್ರಿಸಿಕೊಳ್ಳಬೇಕು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More