Nanjanagudu Shri Srikanteshwara Swami Temple: ನಂಜನಗೂಡು ದೇಗುಲದ ಹುಂಡಿಯಲ್ಲಿ ಕೋಟಿ ಸಂಗ್ರಹ

Nanjanagudu Shri Srikanteshwara Swami Temple: ನಂಜನಗೂಡು ದೇಗುಲದ ಹುಂಡಿಯಲ್ಲಿ ಕೋಟಿ ಸಂಗ್ರಹ

ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Jul 13, 2023 | 10:16 AM

ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ. ಹಾಗೂ ಅಪಾರ ಪ್ರಮಾಣದ ಚಿನ್ನ-ಬೆಳ್ಳಿ ಸಂಗ್ರಹವಾಗಿದೆ.

ಮೈಸೂರು: ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಹುಂಡಿಯಲ್ಲಿ 1 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಒಟ್ಟು 38 ಹುಂಡಿಗಳಲ್ಲಿ 1,77,08,710 ರೂಪಾಯಿ ಸಂಗ್ರಹವಾಗಿದೆ. 65 ಗ್ರಾಂಗೂ ಹೆಚ್ಚು ಚಿನ್ನ, 3 ಕೆಜಿ 540 ಗ್ರಾಂ ಬೆಳ್ಳಿ ಹಾಗೂ 64 ವಿದೇಶಿ ಕರೆನ್ಸಿ ನೋಟು ಹುಂಡಿಯಲ್ಲಿ ಸಂಗ್ರಹವಾಗಿದೆ ಎಂದು ಹಣ ಸಂಗ್ರಹ ಬಗ್ಗೆ ನಂಜನಗೂಡು ಶ್ರೀಕಂಠೇಶ್ವರ ದೇಗುಲ ಮಾಹಿತಿ ನೀಡಿದೆ.