ಎದೆ ಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಲೈನ್​ಮ್ಯಾನ್, ಪವರ್ ಮ್ಯಾನ್ ಕಾರ್ಯಕ್ಕೆ ಮೆಚ್ಚುಗೆ

ಎದೆ ಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಲೈನ್​ಮ್ಯಾನ್, ಪವರ್ ಮ್ಯಾನ್ ಕಾರ್ಯಕ್ಕೆ ಮೆಚ್ಚುಗೆ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jul 05, 2023 | 3:07 PM

ಲೈನ್​ಮ್ಯಾನ್ ಒಬ್ಬರು ಎದೆಮಟ್ಟದ ಮಳೆ ನೀರಿನಲ್ಲಿ ನಡೆದುಕೊಂಡು ವಿದ್ಯುತ್ ಸಂಪರ್ಕ ಸರಿಪಡಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್​ ಆಗಿದ್ದು, ಪವರ್​ ಮ್ಯಾನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಂಗಳೂರು: ಜೂನ್​ ತಿಂಗಳಲ್ಲಿ ಕೈಕೊಟ್ಟಿದ್ದ ಮಳೆರಾಯ ಇದೀಗ ಜುಲೈ ತಿಂಗಳ ಆರಂಭದಲ್ಲೇ ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗಿತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್​​ ಅಲರ್ಟ್​​ ಘೋಷಿಸಿದೆ. ಭಾರಿ ಗಾಳಿ ಮಳೆಗೆ ಹಲವೆಡೆ ಮರಗಳು ಮನೆ ಮೇಲೆ ಉರುಳಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಹಲವೆಡೆ ವಿದ್ಯುತ್​ ಸಂಪರ್ಕ ಕಡಿತವಾಗಿದೆ. ಭಾರಿ ಮಳೆಯಿಂದ ದೇರಳಕಟ್ಟೆಯಲ್ಲಿ ವಿದ್ಯುತ್ ಕೈಕೊಟ್ಟು ಶೇಕಡಾ 40ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಇದನ್ನು ಅರಿತ ಲೈನ್​ ಮ್ಯಾನ್ ನೆರೆ ನೀರಿನಲ್ಲಿ ನಡೆದುಕೊಂಡು ಹೋಗಿ ವಿದ್ಯುತ್ ತಂತಿ ಸರಿಪಡಿಸಿದ್ದಾರೆ. ಎದೆಮಟ್ಟದ ನೀರಿನಲ್ಲಿ ನಡೆದುಕೊಂಡು ಹೋಗಿ ವಿದ್ಯುತ್ ತಂತಿ ಸರಿಪಡಿಸಿದ ಲೈನ್​ಮ್ಯಾನ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.