ಹಂತಕನ ಸೇಡಿಗೆ ಬಲಿಯಾದ ಮಹಿಳೆಯ ಮಗಳು ನನ್ನಮ್ಮನನ್ನು ತಂದುಕೊಡಿ ಅನ್ನುತ್ತಿದ್ದಾಳೆ
ಹಲ್ಲೆಯಲ್ಲಿ ಮಲ್ಲಿಕಾರ್ಜುನಯ್ಯ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮ್ಮನನ್ನು ಕಳೆದುಕೊಂಡಿರುವ ಕವನಳ ಆಕ್ರಂದನ ನೋಡಲಾಗದು ಮಾರಾಯ್ರೇ.
ತುಮಕೂರು: ಜಿಲ್ಲೆಯ ಮಧುಗಿರಿಯ ತಾಲ್ಲೂಕಿನ ಮಿಡಿಗೇಶಿ (Midiheshi) ಗ್ರಾಮದಲ್ಲಿರುವ ದೇವಸ್ಥಾನದ ಜಮೀನಿಗೆ ಸಂಬಂಧಿಸಿದ ವಿವಾದದಲ್ಲಿ ಎರಡು ಕೊಲೆಗಳು ನಡೆದಿವೆ. ಸ್ಥಳೀಯರು ಮತ್ತು ಹತ್ಯೆಗೊಳಗಾದ ಶಿಲ್ಪಾರ ಮಗಳು ಕವನ (Kavana ) ಮತ್ತು ರಾಮಾಂಜಿನಪ್ಪ (Ramanjinappa) ಎನ್ನುವವರ ಪತ್ನಿ ಹೇಳುತ್ತಿರುವ ಹಾಗೆ ಸ್ಥಳೀಯ ಜೆಡಿ(ಎಸ್) ಧುರೀಣ ಶ್ರೀದರ್ ಗುಪ್ತಾ ಮತ್ತು ಅವನ ಸಹಚರರು ಇವರಿಬ್ಬರನ್ನು ಭೀಕರವಾಗಿ ಇರಿದು ಕೊಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಮಲ್ಲಿಕಾರ್ಜುನಯ್ಯ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮ್ಮನನ್ನು ಕಳೆದುಕೊಂಡಿರುವ ಕವನಳ ಆಕ್ರಂದನ ನೋಡಲಾಗದು ಮಾರಾಯ್ರೇ.