ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಬೀದರ್ ಮತ್ತು ಕಾರವಾರದ ಇಬ್ಬರು ಸರ್ಕಾರೀ ನೌಕರರ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ಅರುಣ್​ ಕುಮಾರ್​ ಬೆಳ್ಳಿ

Updated on: Mar 27, 2024 | 11:18 AM

ಶಿವಾನಂದ ಸ್ವಾಮಿಯ ಮನೆಗಳನ್ನು ನೋಡಿ ಮಾರಾಯ್ರೇ. ಸ್ವಾಮೀಜಿಗೆ 2-3 ಮನೆಗಳಿದ್ದಂತಿವೆ. ಇದು ಕೇವಲ ನಮ್ಮ ಕಣ್ಣಿಗೆ ಕಾಣುತ್ತಿರುವ ಆಸ್ತಿ ಮಾತ್ರ. ಬ್ಯಾಂಕ್ ಬ್ಯಾಲೆನ್ಸ್ , ಜಮೀನು, ಸೈಟು, ಒಡವೆ, ವಾಹನಗಳು ಇವೆಲ್ಲವುಗಳ ತಪಾಸಣೆ ನಡೆದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರಿ ನೌಕರರನ್ನು ಸರ್ಕಾರದ ಮಕ್ಕಳೆಂದು ಹೇಳುವುದು ಸಹ ಇದೇ ಕಾರಣಕ್ಕಿರಬಹುದು!

ಬೆಂಗಳೂರು: ಮಗಳಿಗೆ ಯೋಗ್ಯ ವರನ ತಲಾಶ್ ನಲ್ಲಿರುವ ತಂದೆತಾಯಿಗಳು ಹುಡುಗ ಸರ್ಕಾರಿ ನೌಕರಿಯಲ್ಲಿದ್ದರೆ (government servant) ಚಂದ ಅಂತ ಯೋಚಿಸುವುದಕ್ಕೆ ಪ್ರಾಯಶಃ ಕಾರಣ ಇದೇ ಇರಬಹುದು. ಲೋಕಾಯುಕ್ತ ಸರ್ಕಾರಿ ನೌಕರರ ಮನೆಗಳ ಮೇಲೆ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ದಾಳಿ ಮಾಡಿದಾಗೆಲ್ಲ ಸರ್ಕಾರಿ ನೌಕರರ ಶ್ರೀಮಂತಿಕೆ (wealth) ನಮ್ಮ ಕಣ್ಣುಗಳಿಗೆ ರಾಚುತ್ತದೆ. ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಬೀದರ್ ಜಿಲ್ಲೆ ಭಾಲ್ಕಿಯ ಕಾರಂಜಾ ಯೋಜನೆ ವಿಭಾಗದಲ್ಲಿ ಕಾರ್ಯನಿರ್ವಾಹಕ ಎಂಜನೀಯರ್ ಆಗಿ ಕೆಲಸ ಮಾಡುವ ಶಿವಾನಂದ ಸ್ವಾಮಿ (Shivanand Swamy) ಮತ್ತು ಕಾರವಾರದ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಅಗಿ ಕೆಲಸ ಮಾಡುವ ಪ್ರಕಾಶ್ ಆರ್ ರೇವಣ್ಕರ್ (Prakash R Revankar) ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಇವರಿಬ್ಬರೂ ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಮಾಡಿರುವುದನ್ನು ಕಂಡುಕೊಂಡಿದ್ದಾರೆ.

ಶಿವಾನಂದ ಸ್ವಾಮಿಯ ಮನೆಗಳನ್ನು ನೋಡಿ ಮಾರಾಯ್ರೇ. ಸ್ವಾಮೀಜಿಗೆ 2-3 ಮನೆಗಳಿದ್ದಂತಿವೆ. ಇದು ಕೇವಲ ನಮ್ಮ ಕಣ್ಣಿಗೆ ಕಾಣುತ್ತಿರುವ ಆಸ್ತಿ ಮಾತ್ರ. ಬ್ಯಾಂಕ್ ಬ್ಯಾಲೆನ್ಸ್ , ಜಮೀನು, ಸೈಟು, ಒಡವೆ, ವಾಹನಗಳು ಇವೆಲ್ಲವುಗಳ ತಪಾಸಣೆ ನಡೆದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರಿ ನೌಕರರನ್ನು ಸರ್ಕಾರದ ಮಕ್ಕಳೆಂದು ಹೇಳುವುದು ಸಹ ಇದೇ ಕಾರಣಕ್ಕಿರಬಹುದು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಒಂಬತ್ತು ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಹಲವು ದಾಖಲೆಗಳು ಪತ್ತೆ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.