ಲೋಕಾಯುಕ್ತ ಬಲೆಗೆ ಮತ್ತೊಬ್ಬ ಪಾಲಿಕೆ ಅಧಿಕಾರಿ, ಕಾರಿಂದ ದಾಖಲೆಯಿಲ್ಲದ ಹಣ ಬರಾಮತ್ತು

ಅರುಣ್​ ಕುಮಾರ್​ ಬೆಳ್ಳಿ

Updated on: Jan 11, 2025 | 10:36 AM

ಸರ್ಕಾರೀ ನೌಕರರಿಗೆ ಇವತ್ತಿನ ದಿನಗಳಲ್ಲಿ ಉತ್ತಮ ಸಂಬಳ ಸಿಗುತ್ತಿದೆ, ಮೊದಲಿನ ದಿನಗಳಿಗೆ ಹೋಲಿಸಿ ನೋಡಿದರೆ ಪರಿಸ್ಥಿತಿ ಬಹಳ ಬದಲಾಗಿದೆ. ಸರ್ಕಾರೀ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ತಮ್ಮ ಸಂಬಳಗಳಲ್ಲಿ ಮಕ್ಕಳನ್ನು ಓದಿಸಿ ಮನೆಗಳನ್ನು ಸಹ ಕಟ್ಟಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸಂಬಳದ ಹೊರತಾಗಿ ‘ಮೇಲಿನ’ ಆದಾಯ ಇರೋದಿಲ್ಲ. ಬೇರೆ ಇಲಾಖೆಯವರಿಗೆ ದುಡ್ಡಿನ ಮೇಲೆ ಅದ್ಯಾಕೆ ಅಷ್ಟು ವ್ಯಾಮೋಹವೋ?

ಬೆಂಗಳೂರು: ಭ್ರಷ್ಟ ಮಿಕಗಳು ಲೋಕಾಯುಕ್ತ ಬಲೆಗೆ ಬೀಳುವುದು ಮುಂದುವರಿದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಲಯ ಕಚೇರಿ ಮೇಲೆ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಯದುಕೃಷ್ಣ ಹೆಸರಿನ ಅಧಿಕಾರಿಯೊಬ್ಬರನ್ನು ಲಂಚದ ದುಡ್ಡು ಸಮೇತ ಬಲೆಗೆ ಕೆಡವಿದ್ದಾರೆ. ಯದುಕೃಷ್ಣ ಕಾಮಗಾರಿ ಟೆಂಡರ್ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಾರೆ. ಲೋಕಾಯುಕ್ತ ಪೊಲೀಸರು ಯದುಕೃಷ್ಣಗೆ ಸೇರಿದ ಕಾರಿಂದ ದಾಖಲೆಯಿಲ್ಲದ ₹ 2.06 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಅವರ ಚೇಂಬರ್ ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಣ ಎಣಿಸುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರ್: ಲೋಕಾಯುಕ್ತ ದಾಳಿ ವೇಳೆ ಬಯಲು

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.