‘ಸಿದ್ಲಿಂಗು 2’ ಚಿತ್ರದಲ್ಲಿ ರಮ್ಯಾ ಇರ್ತಾರಾ? ಉತ್ತರಿಸಿದ ‘ಲೂಸ್ ಮಾದ’ ಯೋಗಿ

|

Updated on: Mar 23, 2024 | 10:13 AM

‘ಸಿದ್ಲಿಂಗು’ ಸಿನಿಮಾದಲ್ಲಿ ‘ಲೂಸ್ ಮಾದ’ ಯೋಗಿ ಹಾಗೂ ರಮ್ಯಾ ನಟಿಸಿದ್ದರು. ಈ ಚಿತ್ರ 2012ರಲ್ಲಿ ರಿಲೀಸ್ ಆಗಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ಯೋಗಿ ಹಾಗೂ ಸೋನು ಗೌಡ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.

‘ಸಿದ್ಲಿಂಗು’ ಸಿನಿಮಾದಲ್ಲಿ ‘ಲೂಸ್ ಮಾದ’ ಯೋಗಿ (Yogi) ಹಾಗೂ ರಮ್ಯಾ ನಟಿಸಿದ್ದರು. ಈ ಚಿತ್ರ 2012ರಲ್ಲಿ ರಿಲೀಸ್ ಆಗಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ಯೋಗಿ ಹಾಗೂ ಸೋನು ಗೌಡ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ರಮ್ಯಾ ಪಾತ್ರ ಕೊನೆಯಾಗುತ್ತದೆ. ಹೀಗಾಗಿ, ಎರಡನೇ ಪಾರ್ಟ್​ನಲ್ಲಿ ಅವರು ಬರೋದು ಅನುಮಾನವೇ. ಈ ಬಗ್ಗೆ ಯೊಗಿ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ಮೊದಲ ಪಾರ್ಟ್​ನ ಕೊನೆಯಲ್ಲಿ ರಮ್ಯಾ ಪಾತ್ರ ಸಾಯುತ್ತದೆ. ಹೀಗಾಗಿ ಎರಡನೇ ಪಾರ್ಟ್ನ್​ನಲ್ಲಿ ಅವರು ಬರೋಕೆ ಸಾಧ್ಯವಿಲ್ಲ. ಫ್ಲ್ಯಾಶ್​ಬ್ಯಾಕ್​ನಲ್ಲಿ ಅವರನ್ನು ತರಬಹುದಲ್ಲ ಎಂದು ಕೆಲವರು ಹೇಳಿದರು. ಆ ರೀತಿ ತಂದರೆ ಚೆನ್ನಾಗಿ ಇರಲ್ಲ’ ಎಂದರು ಯೋಗಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ