ಬಾಗಲಕೋಟೆ ಕ್ಷೇತ್ರದ ಪ್ರಭಾವಿ ನಾಯಕರ ಮನೆಗಳಿಗೆ ತೆರಳಿ ಸಹಾಯ ಯಾಚಿಸುತ್ತಿರುವ ಸಂಯುಕ್ತಾ ಪಾಟೀಲ್
ಟಿಕೆಟ್ ಪಡೆಯುವಲ್ಲಿ ಸಫಲರಾಗಿರುವ ಸಂಯುಕ್ತಾ ಕ್ಷೇತ್ರದ ಪ್ರಭಾವಿ ಮತ್ತು ಹಿರಿಯ ನಾಯಕರ ಮನೆಗಳಿಗೆ ಭೇಟಿ ನೀಡಿ ಅವರ ಸಹಕಾರ ಯಾಚಿಸುತ್ತಿದ್ದಾರೆ. ಶಾಸಕ ಎಚ್ ವೈ ಮೇಟಿ ಮತ್ತು ಮಾಜಿ ಸಚಿವ ಎಸ್ ಆರ್ ಪಾಟೀಲ್ ಅವರ ಮನೆಗಳಲ್ಲಿ ಸಂಯುಕ್ತಾ ತಮ್ಮ ಬಂಧುಗಳೊಂದಿಗೆ ತೆರಳಿ ಮಾತುಕತೆ ನಡೆಸುತ್ತಿರುವುದನ್ನು ನೋಡಬಹುದು.
ಬಾಗಲಕೋಟೆ: ಸಂಯುಕ್ತಾ ಪಾಟೀಲ್ (Samyukta Patil) ಮಾಡುತ್ತಿರುವ ಕಸರತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ (Bagalkot constituency) ಈ ಬಾರಿಯ ಚುನಾವಣೆ ಗೆಲ್ಲಲು ಸಾಕಾಗಲಾರದು. ಯಾಕೆ ಅಂತ ಎಲ್ಲರಿಗೆ ಚೆನ್ನಾಗಿ ಗೊತ್ತು. ದೃಶ್ಯಗಳಲ್ಲಿ ನಿಮಗೆ ಕಾಣುತ್ತಿರುವ ಹಾಗೆ ಅದ್ಯಾವುದೋ ಮಾಯೆಯಿಂದ ಟಿಕೆಟ್ ಪಡೆಯುವಲ್ಲಿ ಸಫಲರಾಗಿರುವ ಸಂಯುಕ್ತಾ ಕ್ಷೇತ್ರದ ಪ್ರಭಾವಿ ಮತ್ತು ಹಿರಿಯ ನಾಯಕರ ಮನೆಗಳಿಗೆ ಭೇಟಿ ನೀಡಿ ಅವರ ಸಹಕಾರ ಯಾಚಿಸುತ್ತಿದ್ದಾರೆ. ಶಾಸಕ ಎಚ್ ವೈ ಮೇಟಿ (HY Meti) ಮತ್ತು ಮಾಜಿ ಸಚಿವ ಎಸ್ ಆರ್ ಪಾಟೀಲ್ (SR Patil) ಅವರ ಮನೆಗಳಲ್ಲಿ ಸಂಯುಕ್ತಾ ತಮ್ಮ ಬಂಧುಗಳೊಂದಿಗೆ ತೆರಳಿ ಮಾತುಕತೆ ನಡೆಸುತ್ತಿರುವುದನ್ನು ನೋಡಬಹುದು. ಅವರ ತಂದೆ ಶಿವಾನಂದ ಪಾಟೀಲ್ ಗುಡಿ ಗುಂಡಾರಗಳನ್ನು ಸುತ್ತಲಾರಂಭಿಸಿ ಮಗಳ ಯಶಸ್ಸಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ ಈ ಭಾಗದ ಅತ್ಯಂತ ಜನಪ್ರಿಯ ನಾಯಕೆ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದರು. ಈ ಬಾರಿ ಅವರು ಖಂಡಿತವಾಗಿ ಗೆಲ್ಲುತ್ತಾರೆ ಅಂತ ರಾಜ್ಯದ ಎಲ್ಲ ನಾಯಕರಿಗೆ ಗೊತ್ತಿತ್ತು. ಕಾಂಗ್ರೆಸ್ ಹೈಕಮಾಂಡ್ ನಡೆಯಿಂದ ತೀವ್ರವಾಗಿ ಬೇಸರಗೊಂಡಿರುವ ವೀಣಾ ಮತ್ತವರ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್ ಕಾಂಗ್ರೆಸ್ ನಾಯಕತ್ವಕ್ಕೆ ಸೆಡ್ಡು ಹೊಡೆದಿದ್ದಾರೆ. ಜನರ ಸಹಾನುಭೂತಿ ವೀಣಾ ಪರವಾಗಿರುವುದರಿಂದ ಸಂಯುಕ್ತಾ ಮತ್ತು ಶಿವಾನಂದ್ ಪಾಟೀಲ್ ಏನೇ ಕಷ್ಟಪಟ್ಟರೂ ಗೆಲುವು ಸುಲಭವಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವೀಣಾ ಕಾಶಪ್ಪನವರ್‌ಗೆ ಬಾಗಲಕೋಟೆ ಟಿಕೆಟ್ ಮಿಸ್? ಕಾಂಗ್ರೆಸ್ ವಿರುದ್ಧ ಬೆಂಬಲಿಗರ ಧರಣಿ!

