ಲಾರಿ ಮುಷ್ಕರದಿಂದ ಆಗುತ್ತಿರುವ ಸಮಸ್ಯೆಗಳನ್ನು ಲಾರಿ ಮಾಲೀಕರೂ ಆಗಿರುವ ರಾಯಚೂರಿನ ರೈತ ವಿವರಿಸುತ್ತಾರೆ

ಅರುಣ್​ ಕುಮಾರ್​ ಬೆಳ್ಳಿ

Updated on: Apr 17, 2025 | 11:20 AM

ರಾಯಚೂರು ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವುದರಿಂದ ಜನರಿಗೆ ಮಾಹಿತಿಯ ಕೊರತೆ ಇದೆ, ಮಷ್ಕರಗಳಿಂದ ರೈತಾಪಿ ಸಮುದಾಯ ಹೆಚ್ಚು ತೊಂದರೆಗೊಳಗಾಗುತ್ತದೆ, ಲಾರಿ ಮುಷ್ಕರ ನಡೆಯುತ್ತಿರುವ ವಿಷಯ ಜಿಲ್ಲೆಯ ಬಹಳಷ್ಟು ರೈತರಿಗೆ ಗೊತ್ತಿಲ್ಲ, ಅವರು ಹೇಗೋ ತಮ್ಮ ಬೆಳೆಯನ್ನು ಎಪಿಎಂಸಿಗೆ ತಂದರೂ ಮಂಡಿಯವರು ಖರೀದಿಗೆ ಹಿಂದೇಟು ಹಾಕುತ್ತಾರೆ ಎಂದು ನಾಗಭೂಷಣ ಹೇಳುತ್ತಾರೆ.

ರಾಯಚೂರು, ಏಪ್ರಿಲ್ 17: ಲಾರಿ ಮುಷ್ಕರದಿಂದ ಏನೆಲ್ಲ ಸಮಸ್ಯೆಗಳಾಗುತ್ತವೆ ಅನ್ನೊದನ್ನು ಎರಡು ಲಾರಿಗಳ ಮಾಲೀಕನಾಗಿರುವ ಜೊತೆಗೆ ರೈತರೂ ಆಗಿರುವ ರಾಯಚೂರಿನ ನಾಗಭೂಷಣ (Nagabhushana from R) ಹೇಳಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು, ಲಾರಿಗಳನ್ನು ಬ್ಯಾಂಕ್ ನಲ್ಲಿ ಸಾಲ ಮಾಡಿ ಖರೀದಿಸಿದ ಕಾರಣ ಸಾಲದ ಮಾಸಿಕ ಕಂತು ಕಟ್ಟಲಾಗದು, ಬ್ಯಾಂಕ್​​ನವರು ಬಂದು ಲಾರಿಯನ್ನು ಸೀಜ್ ಮಾಡುತ್ತಾರೆ ಎಂದು ಹೇಳುತ್ತಾರೆ. ಇದು ರೈತರು ಬೆಳೆದ ಫಸಲು ಮಾರುಕಟ್ಟೆಗೆ, ಎಪಿಎಂಸಿಗೆ ಬರುವ ಸಮಯ, ಟ್ರಾನ್ಸ್​​ಪೊರ್ಟ್ ಮಾಡಲು ಲಾರಿಗಳಿಲ್ಲದಿದ್ದರೆ ಅವರೆನೋ ಚಿಕ್ಕಪುಟ್ಟ ಗೂಡ್ಸ್​ ಕ್ಯಾರಿಯರ್ ಗಳ ಮೂಲಕ ಮಾಲನ್ನು ಎಪಿಎಂಸಿ ತರಬಹುದು, ಅದರೆ ವ್ಯಾಪಾರಸ್ಥರು ಖರೀದಿಗೆ ಅಂತ ಇಲ್ಲಿಗೆ ಬರಲ್ಲ, ಎಪಿಎಂಸಿ ಬಂದ್ ಮಾಡಬೇಕಾಗುತ್ತದೆ ಎಂದು ನಾಗಭೂಷಣ ಹೇಳುತ್ತಾರೆ.

ಇದನ್ನೂ ಓದಿ:  ಲಾರಿ ಮುಷ್ಕರ: ಇಂದಿನಿಂದ ಮತ್ತಷ್ಟು ತೀವ್ರ ಹೋರಾಟ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವ ಸಾಧ್ಯತೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.