Video: ಸಣ್ಣ ಅಪಘಾತ, ದೊಡ್ಡ ಜಗಳ, ಪಿಜ್ಜಾ ಡೆಲಿವರಿ ಏಜೆಂಟ್​ನ ಕಪಾಳಕ್ಕೆ ಹೊಳೆದು, 30 ಸಾವಿರ ರೂ.ಗೆ ಬೇಡಿಕೆ ಇಟ್ಟ ಮಹಿಳೆ

Updated on: Sep 15, 2025 | 10:42 AM

ಅಪಘಾತ ಸಣ್ಣದೇ ಆದರೆ ಜಗಳ ಮಾತ್ರ ದೊಡ್ಡ ಮಟ್ಟದಲ್ಲಿ ನಡೆದಿದೆ. ಪಿಜ್ಜಾ ಡೆಲಿವರಿ ಏಜೆಂಟ್​ ಏನೋ ತಿಳಿಯದೆ ತನ್ನ ಬೈಕ್​​ನ್ನು ಮಹಿಳೆಯ ಬೈಕ್​ಗೆ ತಾಗಿಸಿದ್ದಾನೆ. ಇಷ್ಟಕ್ಕೇ ಕೋಪಗೊಂಡ ಆಕೆ ಡೆಲಿವರಿಗೆ ಏಜೆಂಟ್​ಗೆ ಕಪಾಳ ಮೋಕ್ಷ ಮಾಡಿದ್ದಲ್ಲದೆ 30 ಸಾವಿರ ರೂ.ಗೆ ಬೇಡಿಕೆ ಇಟ್ಟಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.

ಲಕ್ನೋ, ಸೆಪ್ಟೆಂಬರ್ 15: ಅಪಘಾತ ಸಣ್ಣದೇ ಆದರೆ ಜಗಳ ಮಾತ್ರ ದೊಡ್ಡ ಮಟ್ಟದಲ್ಲಿ ನಡೆದಿದೆ. ಪಿಜ್ಜಾ ಡೆಲಿವರಿ ಏಜೆಂಟ್​ ಏನೋ ತಿಳಿಯದೆ ತನ್ನ ಬೈಕ್​​ನ್ನು ಮಹಿಳೆಯ ಬೈಕ್​ಗೆ ತಾಗಿಸಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಆಕೆ ಡೆಲಿವರಿಗೆ ಏಜೆಂಟ್​ಗೆ ಕಪಾಳ ಮೋಕ್ಷ ಮಾಡಿದ್ದಲ್ಲದೆ 30 ಸಾವಿರ ರೂ.ಗೆ ಬೇಡಿಕೆ ಇಟ್ಟಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.

ಜನದಟ್ಟಣೆಯ ರಸ್ತೆಗಳಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಡೆಲಿವರಿ ಗೈ ಆಕಸ್ಮಿಕವಾಗಿ ಮಹಿಳೆ ಇದ್ದ ವಾಹನಕ್ಕೆ ಡಿಕ್ಕಿ ಹೊಡೆದಾಗ ವಾಗ್ವಾದ ಪ್ರಾರಂಭವಾಯಿತು. ಇದರಿಂದ ಕೋಪಗೊಂಡ ಮಹಿಳೆ ಏಜೆಂಟ್‌ಗೆ ಕಪಾಳಮೋಕ್ಷ ಮಾಡಿ ಅವನ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾಳೆ.ದುಡ್ಡು ಕೊಡು ಇಲ್ಲವಾದರೆ ಕೋರ್ಟ್​​ಗೆ ಹೋಗ್ತೀನಿ ಎಂದು ಧಮ್ಕಿ ಹಾಕಿದ್ದಾಳೆ. ಇವರಿಬ್ಬರ ಮಧ್ಯೆ ಪ್ರವೇಸಿದ ವ್ಯಕ್ತಿಯೊಬ್ಬರು ಯಾರಿಗೂ ಹೊಡೆಯುವ ಹಕ್ಕು ನಿಮಗಿಲ್ಲ ಎಂದು ಮಹಿಳೆಗೆ ಗದರಿದರೆ ನೀನು ನನಗೆ ಪಾಠ ಮಾಡೋ ಅಗತ್ಯವಿಲ್ಲ ಎಂದು ಮಹಿಳೆ ಹೇಳಿದ್ದಾಳೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ