AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಧಗಧಗನೇ ಹೊತ್ತಿ ಉರಿದ ಬಿಎಂಟಿಸಿ ಬಸ್, ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಬಚಾವ್!

ಬೆಂಗಳೂರು: ಧಗಧಗನೇ ಹೊತ್ತಿ ಉರಿದ ಬಿಎಂಟಿಸಿ ಬಸ್, ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಬಚಾವ್!

Ganapathi Sharma
|

Updated on: Sep 15, 2025 | 11:00 AM

Share

ಬಿಎಂಟಿಸಿ ಬಸ್ಸೊಂದು ಧಗಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರಿನ ಹೆಚ್​ಎಎಲ್​​ ಏರ್​​ಪೋರ್ಟ್​ ಮುಖ್ಯ ಗೇಟ್​​ ಬಳಿ ಸಂಭವಿಸಿದೆ. ಅದೃಷ್ಟವಶಾತ್, ಪ್ರಯಾಣಿಕರೆಲ್ಲ ಜೀವಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ ಅಷ್ಟರಲ್ಲಾಗಲೇ ಬಸ್ ಬಹುತೇಕ ಸುಟ್ಟು ಕರಕಲಾಗಿದೆ. ಘಟನೆಯ ವಿಡಿಯೋ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 15: ಎಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ ದಿಢೀರನೇ ವ್ಯಾಪಿಸಿ ಇಡೀ ಬಿಎಂಟಿಸಿ ಬಸ್ ಧಗಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರಿನ ಹೆಚ್​ಎಎಲ್​​ ಏರ್​​ಪೋರ್ಟ್​ ಮುಖ್ಯ ಗೇಟ್​​ ಬಳಿ ಸೊಮವಾರ ಮುಂಜಾನೆ ಸಂಭವಿಸಿದೆ. ಮೆಜೆಸ್ಟಿಕ್​ನಿಂದ ಕಾಡುಗೋಡಿಗೆ ತೆರಳುತ್ತಿದ್ದ ಬಿಎಂಟಿಸಿ ಬಸ್​ನ ಎಂಜಿನ್​ನಲ್ಲಿ ಬೆಳಗ್ಗೆ 5.15ಕ್ಕೆ ಬೆಂಕಿ ಕಾಣಿಸಿದೆ. ತಕ್ಷಣವೇ ಎಚ್ಚೆತ್ತ ಚಾಲಕ ಬಸ್ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಕೂಡಲೇ ಇಡೀ ಬಸ್ ಹೊತ್ತಿ ಉರಿದಿದೆ. ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಎಎಲ್​​​ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.