Lunar Eclipse 2025: ಭಾನುವಾರ ಖಗ್ರಾಸ ಚಂದ್ರಗ್ರಹಣ, ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ 11ಕ್ಕೆ ಬಂದ್

Updated on: Sep 06, 2025 | 2:03 PM

ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರ ಗ್ರಹಣ ಸೆಪ್ಟೆಂಬರ್ 7 ರಂದು ನಡೆಯಲಿದೆ. ಸುದೀರ್ಘವಾದ ಚಂದ್ರ ಗ್ರಹಣ ಇದಾಗಿರಲಿದ್ದು, ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ ನಾಳೆ ಬೆಳಗ್ಗೆ 11ಕ್ಕೆ ಬಂದ್ ಆಗಲಿದೆ. ನಂತರ ಸೋಮವಾರ ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದ, ಶುದ್ಧೀಕರಣ ಕಾರ್ಯಗಳು ನಡೆಯಲಿವೆ. ನಂತರ ಭಕ್ತರ ದರ್ಶನಕ್ಕೆ ತೆರೆಯಲಿದೆ ಎಂದು ದೇಗುಲದ ಆಡಳಿತ ತಿಳಿಸಿದೆ.

ಬೆಂಗಳೂರು, ಸೆಪ್ಟೆಂಬರ್ 6: ಸೆಪ್ಟೆಂಬರ್ 7 ರಂದು ಖಗ್ರಾಸ ಚಂದ್ರಗ್ರಹಣ ನಡೆಯಲಿದ್ದು, ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನ ಬೆಳಗ್ಗೆ 11 ರಿಂದ ಬಂದ್ ಆಗಿರಲಿದೆ. ಬೆಳಗ್ಗೆ 11 ಗಂಟೆಗೆ ಗವಿಗಂಗಾಧರೇಶ್ವರನಿಗೆ ಅಭಿಷೇಕ ಮಾಡಿದ ನಂತರ ದೇಗುಲದ ಬಾಗಿಲು ಹಾಕಲಾಗುವುದು ಎಂದು ಆಡಳಿತ ತಿಳಿಸಿದೆ. ಸೋಮವಾರ ಬೆಳಗ್ಗೆ ದೇಗುಲ ಮತ್ತೆ ಭಕ್ತರಿಗೆ ಮುಕ್ತವಾಗಲಿದೆ. ಭಕ್ತರು ಸಹಕರಿಸುವಂತೆ ಕೋರಿದೆ. ಈ ಬಾರಿ ಸುದೀರ್ಘವಾದ ಗ್ರಹಣ ಆಗಲಿದ್ದು, ಸುಮಾರು ನಾಲ್ಕು ಗಂಟೆಗಳ ಕಾಲ ಇರಲಿದೆ. ಇದು ಸ್ಪರ್ಶದಿಂದ ಆರಂಭಿಸಿ ಮೋಕ್ಷಪರ್ಯಂತರದ ಅವಧಿಯಾಗಿದೆ. 9-30 ರಿಂದ 1-30 ಗ್ರಹಣ ನಡೆಯಲಿದೆ.