AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನೇಶ್ ಕಾರ್ತಿಕ್ ಅವರ 21 ವರ್ಷಗಳ ಹಳೆಯ ವಿಡಿಯೋ ವೈರಲ್

ದಿನೇಶ್ ಕಾರ್ತಿಕ್ ಅವರ 21 ವರ್ಷಗಳ ಹಳೆಯ ವಿಡಿಯೋ ವೈರಲ್

ಝಾಹಿರ್ ಯೂಸುಫ್
|

Updated on: Sep 06, 2025 | 12:39 PM

Share

2004 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ಮೂಲಕ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.3 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 204 ರನ್​ಗಳು ಮಾತ್ರ.

ಟೀಮ್ ಇಂಡಿಯಾದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಅವರ 21 ವರ್ಷಗಳ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2 ದಶಕಗಳ ಹಿಂದೆ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಡಿಕೆ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಸ್ಟಂಪಿಂಗ್ ಮಾಡಿದ್ದರು. ಇದೀಗ ಈ ಸ್ಟಂಪಿಂಗ್​ಗೆ ಬರೋಬ್ಬರಿ 21 ವರ್ಷಗಳು ತುಂಬಿವೆ. ಹೀಗಾಗಿಯೇ ಇದೀಗ ದಿನೇಶ್ ಕಾರ್ತಿಕ್ ಅವರ ಕೀಪಿಂಗ್ ಚಮತ್ಕಾರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ.

2004 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ಮೂಲಕ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.3 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 204 ರನ್​ಗಳು ಮಾತ್ರ.

ಈ ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೈಕೆಲ್ ವಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. 140 ಎಸೆತಗಳನ್ನು ಎದುರಿಸಿದ ವಾನ್ 74 ರನ್ ಬಾರಿಸಿದ್ದರು. ಈ ಹಂತದಲ್ಲಿ ಹರ್ಭಜನ್ ಸಿಂಗ್ ಎಸೆದ ಎಸೆತವನ್ನು ವಾನ್ ಮುನ್ನುಗ್ಗಿ ಬಂದು ಬಾರಿಸಲು ಯತ್ನಿಸಿದ್ದರು.  ಈ ವೇಳೆ ಅದ್ಭುತವಾಗಿ ಚೆಂಡು ಹಿಡಿದ 19 ವರ್ಷದ ದಿನೇಶ್ ಕಾರ್ತಿಕ್ ಕ್ಷಣಾರ್ಧದಲ್ಲಿ ಸ್ಟಂಪ್ ಮಾಡುವ ಮೂಲಕ ಬೇಲ್ಸ್ ಎಗರಿಸಿದರು.

ಈ ವಿಕೆಟ್ ಸಿಗುತ್ತಿದ್ದಂತೆ ಕಂಬ್ಯಾಕ್ ಮಾಡಿದ ಟೀಮ್ ಇಂಡಿಯಾ, ಇಂಗ್ಲೆಂಡ್ ತಂಡವನ್ನು 181 ರನ್​ಗಳಿಗೆ ಆಲೌಟ್ ಮಾಡಿ 23 ರನ್​ಗಳ ಜಯ ಸಾಧಿಸಿತು.