ಕೇಸ್ ವಾಪಸ್ ತೆಗೆದುಕೊಂಡರೆ ಮಡೆನೂರು ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತ ಮಹಿಳೆ

Updated on: Jul 08, 2025 | 5:40 PM

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ಅವರಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಆರೋಪ ಮಾಡಿದ್ದ ಮಹಿಳೆ ಇಂದು (ಜುಲೈ 8) ಸುದ್ದಿಗೋಷ್ಠಿ ನಡೆಸಿದ್ದಾರೆ. ಮನು ವಿರುದ್ಧ ತಮ್ಮ ಬಳಿ ಇನ್ನೂ ಹಲವು ಸಾಕ್ಷಿಗಳಿವೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.

ನಟ ಮಡೆನೂರು ಮನು (Madenur Manu) ಅವರಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಆರೋಪ ಮಾಡಿದ್ದ ಮಹಿಳೆ ಇಂದು (ಜು.8) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಮನು ವಿರುದ್ಧ ತಮ್ಮ ಬಳಿ ಇನ್ನೂ ಅನೇಕ ಸಾಕ್ಷಿಗಳಿವೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ. ‘ಯಾವುದೇ ರೀತಿಯ ಸಾಕ್ಷ್ಯವನ್ನು ಬಿಡುಗಡೆ ಮಾಡಬಾರದು ಅಂತ ಅವನು ನನಗೆ ನೋಟಿಸ್ ಕಳಿಸಿದ್ದಾನೆ. ಹಾಗಾಗಿ ನಾನು ಯಾವ ಸಾಕ್ಷಿಯನ್ನೂ ಬಿಡೋಕೆ ಆಗಲ್ಲ. ಕೇಸ್ ವಾಪಸ್ ತೆಗೆದುಕೊಳ್ಳಲು ಹೇಳಿ. ಆಗ ನಾನು ನನ್ನ ಬಳಿ ಇರುವ ಸಾಕ್ಷಿ ಬಿಡುಗಡೆ ಮಾಡುತ್ತೇನೆ’ ಎಂದು ಆಕೆ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 08, 2025 05:39 PM