ಬೆಂಗಳೂರು: ಪಾರಿವಾಳ ಹಿಡಿಲು ಹೋಗಿ ವಿದ್ಯುತ್​ ಶಾಕ್​ಗೆ ಒಳಗಾಗಿದ್ದ ಓರ್ವ ಬಾಲಕ ಚಿಕಿತ್ಸೆ ಫಲಿಸದೆ ಸಾವು

| Updated By: ಆಯೇಷಾ ಬಾನು

Updated on: Dec 04, 2022 | 3:15 PM

ಮನೆ ಮೇಲೆ ಪಾರಿವಾಳ ಹಿಡಿಯಲು ಸ್ನೇಹಿತನ ಜೊತೆ ಹೋಗಿದ್ದಾಗ ಹೈ ಟೆನ್ಶನ್ ವೈರ್ ಸ್ಪರ್ಶವಾಗಿತ್ತು. ಈ ವೇಳೆ ಇಬ್ಬರು ಬಾಲಕರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ತೀರ ಕೆಳಕ್ಕೆ ಇರುವ ಹೈಟೆನ್ಶನ್ ಲೈನ್ ಬಗ್ಗೆ ಬೆಸ್ಕಾಂ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಹೈ ಟೆನ್ಶನ್ ಲೈನ್ ಕರೆಂಟ್ ಶಾಕ್ ಪ್ರಕರಣಕ್ಕೆ ಸಂಬಂಧಿಸಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸುಪ್ರಿತ್ ಸಾವನ್ನಪ್ಪಿದ್ದಾನೆ. ಮೂರು ದಿನದಿಂದ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಬಾಲಕ ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ತಂದೆ ಮಂಜುನಾಥ್, ತಾಯಿ ಪ್ರೇಮ ಅವ್ರ ಒಬ್ಬನೇ ಮಗ ಸುಪ್ರಿತ್ ಮೊನ್ನೆ ಮನೆ ಮೇಲೆ ಪಾರಿವಾಳ ಹಿಡಿಯಲು ಸ್ನೇಹಿತನ ಜೊತೆ ಹೋಗಿದ್ದಾಗ ಹೈ ಟೆನ್ಶನ್ ವೈರ್ ಸ್ಪರ್ಶವಾಗಿತ್ತು. ಈ ವೇಳೆ ಇಬ್ಬರು ಬಾಲಕರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ತೀರ ಕೆಳಕ್ಕೆ ಇರುವ ಹೈಟೆನ್ಶನ್ ಲೈನ್ ಬಗ್ಗೆ ಬೆಸ್ಕಾಂ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published on: Dec 04, 2022 03:15 PM