ಬೈಕ್​ ಸವಾರನಿಗೆ ಬಿಜೆಪಿಯ ರವಿಕುಮಾರ್ ಕಾರು ಡಿಕ್ಕಿ: ಆಸ್ಪತ್ರೆಗೆ ದಾಖಲಿಸಲು ಹಿಂದೇಟು, ಸ್ಥಳೀಯರಿಂದ ಕ್ಲಾಸ್

TV9kannada Web Team

TV9kannada Web Team | Edited By: Ramesh B Jawalagera

Updated on: Dec 04, 2022 | 5:59 PM

ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್​.ರವಿ ಕುಮಾರ್ ಅವರ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಬೈಕ್​ ಸವಾರನನ್ನು ಆಸ್ಪತ್ರೆಗೆ ದಾಖಲಿಸಲು ಹಿಂದೇಟು ಹಾಕಿದಾಗ ಸ್ಥಳೀಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ

ಕೋಲಾರ: ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್​.ರವಿ ಕುಮಾರ್ ಅವರ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ. ಇಂದು(ಡಿಸೆಂಬರ್ 04) ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಗೇಟ್​ ಬಳಿ ಈ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಬೈಕ್ ಸವಾರ ಶಿವನಪುರದ ಗೋಪಾಲ್​ಗೆ ಗಾಯಗಳಾಗಿವೆ. ಆದ್ರೆ, ಆಸ್ಪತ್ರೆಗೆ ದಾಖಲಿಸಲು ರವಿ ಕುಮಾರ್ ಹಿಂದೇಟು ಹಾಕಿದ್ದಾರೆ. ಇದರಿಂದ ಕೋಪಗೊಂಡ ಸ್ಥಳೀಯರು ನೀನ್ಯಾವ ಸೀಮೆ MLC ಎಂದು ಎನ್.ರವಿಕುಮಾರ್​ಗೆ ಕ್ಲಾಸ್ ತೆಗೆದುಕೊಂಡರು.

Follow us on

Click on your DTH Provider to Add TV9 Kannada