‘ಟೆಲಿವಿಷನ್ ಕ್ರಿಕೆಟ್ ಲೀಗ್’ (Television Cricket League) 4ನೇ ಸೀಸನ್ ಬಂದಿದೆ. ಇದರ ಟ್ರೋಫಿ, ಜೆರ್ಸಿ ಅನಾವರಣ ಮಾಡಲಾಗಿದೆ. ನಟ ಸತೀಶ್ ನೀನಾಸಂ (Sathish Ninasam) ಜೊತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿ ಈ ಕ್ರಿಕೆಟ್ ಲೀಗ್ ಅದ್ದೂರಿ ಲಾಂಚ್ ಮಾಡಿದ್ದಾರೆ. ಮಿರಿಮಿರಿ ಮಿಂಚುವ ಆಕರ್ಷಕ ಟ್ರೋಫಿ ಗಮನ ಸೆಳೆಯುತ್ತಿದೆ. ಬಣ್ಣದ ಲೋಕಕ್ಕೂ ಕ್ರಿಕೆಟ್ಗೂ ಹತ್ತಿರದ ನಂಟು. ಸೆಲೆಬ್ರಿಟಿಗಳು ಕ್ರಿಕೆಟ್ ಅಂಗಳಕ್ಕೆ ಇಳಿದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಈ ಕಾರಣದಿಂದ ‘ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4’ (TCL) ನಿರೀಕ್ಷೆ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.