Video: ವಿಧಾನಸಭೆಗೆ ಚಿರತೆ ವೇಷ ತೊಟ್ಟು ಬಂದ ಶಾಸಕ
ಮಹಾರಾಷ್ಟ್ರ ವಿಧಾನಸಭಾ ಅಧಿವೇಶನ ಶುರುವಾಗಿದೆ. ಸ್ವತಂತ್ರ ಶಾಸಕ ಶರದ್ ಸೋನಾವಾನೆ ಚಿರತೆಯ ವೇಷ ತೊಟ್ಟು ವಿಧಾನಸಭೆಗೆ ಆಗಮಿಸಿದ್ದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿ ಕುರಿತು ಪ್ರತಿಭಟಿಸಲು ಅವರು ಈ ವೇಷ ಧರಿಸಿದ್ದರು.ವಿಶೇಷವಾಗಿ ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ಚಿರತೆ ದಾಳಿ ಹೆಚ್ಚಾಗಿರುವುದರ ಬಗ್ಗೆ ಹೇಳುವುದು ಇದರ ಉದ್ದೇಶವಾಗಿತ್ತು. ನಾಗ್ಪುರ ನಗರದ ಪಾರ್ಡಿ ಪ್ರದೇಶದಲ್ಲಿ ಚಿರತೆ ದಾಳಿಯಲ್ಲಿ ಏಳು ಜನರು ಗಾಯಗೊಂಡಿದ್ದರು. ಘಟನೆಯ ಬಳಿಕ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದಿತ್ತು. ಚಿರತೆ ದಾಳಿಯನ್ನು ವಿಪತ್ತು ಎಂದು ಪರಿಗಣಿಸಬೇಕು.
ನಾಗ್ಪುರ, ಡಿಸೆಂಬರ್ 11: ಮಹಾರಾಷ್ಟ್ರ ವಿಧಾನಸಭಾ ಅಧಿವೇಶನ ಶುರುವಾಗಿದೆ. ಸ್ವತಂತ್ರ ಶಾಸಕ ಶರದ್ ಸೋನಾವಾನೆ ಚಿರತೆಯ ವೇಷ ತೊಟ್ಟು ವಿಧಾನಸಭೆಗೆ ಆಗಮಿಸಿದ್ದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿ ಕುರಿತು ಪ್ರತಿಭಟಿಸಲು ಅವರು ಈ ವೇಷ ಧರಿಸಿದ್ದರು. ವಿಶೇಷವಾಗಿ ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ಚಿರತೆ ದಾಳಿ ಹೆಚ್ಚಾಗಿರುವುದರ ಬಗ್ಗೆ ಹೇಳುವುದು ಉದ್ದೇಶವಾಗಿತ್ತು. ನಾಗ್ಪುರ ನಗರದ ಪಾರ್ಡಿ ಪ್ರದೇಶದಲ್ಲಿ ಚಿರತೆ ದಾಳಿಯಲ್ಲಿ ಏಳು ಜನರು ಗಾಯಗೊಂಡಿದ್ದರು. ಘಟನೆಯ ಬಳಿಕ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದಿತ್ತು. ಚಿರತೆ ದಾಳಿಯನ್ನು ವಿಪತ್ತು ಎಂದು ಪರಿಗಣಿಸಬೇಕು ಎಂದು ಶರದ್ ಹೇಳಿದ್ದಾರೆ.
2014ರಿಂದ ಇಲ್ಲಿಯವರೆಗೂ ನಾನು ಈ ವಿಷಯದ ಬಗ್ಗೆ ಮಾತನಾಡುತ್ತಲೇ ಇದ್ದೇನೆ ಆದರೆ ಯಾವುದೇ ಪ್ರಯೋಜನವಾಗಿಲ್ಲ, ತಮ್ಮ ಕ್ಷೇತ್ರದಲ್ಲಿ ಕಳೆದ 3 ತಿಂಗಳಿಂದ ಚಿರತೆ ದಾಳಿಯಲ್ಲಿ 55 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

