Drones to supervise safety of jail inmates: ಕೈದಿಗಳ ಮೇಲೆ ನಿಗಾ ಇಡಲು ಮಹಾರಾಷ್ಟ್ರ ಬಂಧಿಖಾನೆ ಇಲಾಖೆಯಿಂದ ಡ್ರೋನ್ ಬಳಸುವ ನಿರ್ಧಾರ

|

Updated on: Apr 23, 2023 | 8:19 AM

ರಾತ್ರಿ ಸಮಯದ ಸರ್ವೇಕ್ಷಣೆಗಾಗಿಯೂ ಡ್ರೋನ್ ಗಳನ್ನು ಬಳಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಜೈಲಿನ ಆವರಣದಲ್ಲಿ ಏನು ನಡೆಯುತ್ತಿದೆ ಅಂತ ನಮಗೆ ಕೂಡಲೇ ಗೊತ್ತಾಗುತ್ತದೆ ಎಂದು ಗುಪ್ತಾ ಹೇಳುತ್ತಾರೆ.

ಮಹಾರಾಷ್ಟ್ರದ ಬಂಧಿಖಾನೆ ಇಲಾಖೆಯು (Maharashtra prisons department) ಜೈಲುಗಳಲ್ಲಿ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಮತ್ತು ಕೈದಿಗಳ (inmates) ಚಲನವಲನಗಳ ಮೇಲೆ ಮೇಲೆ ನಿಗಾ ಇಡಲು ಡ್ರೋನ್ ಗಳನ್ನು (drones) ಬಳಸುವ ನಿರ್ಧಾರ ಮಾಡಿದೆ. ಯೋಜನೆಯ ಮೊದಲ ಹಂತದಲ್ಲಿ ಎಂಟು ಸೆಂಟ್ರಲ್, ಎರಡು ಜಿಲ್ಲಾ ಕಾರಾಗೃಹ ಮತ್ತು ಎರಡು ಮುಕ್ತ ಜೈಲು-ಹೀಗೆ 12 ಬಂಧಿಖಾನೆಗಳಲ್ಲಿ ಡ್ರೋನ್ ಗಳನ್ನು ಬಳಸುಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತಾಭ್ ಗುಪ್ತಾ ಹೇಳುತ್ತಾರೆ.

‘ಡ್ರೋನ್ ಗಳ ಬಳಕೆಯಿಂದ ನಮಗೆ ಜೈಲುಗಳ ವಿಹಂಗಮ ನೋಟ ಸಿಗುವ ಜೊತೆ ಪುಟೇಜ್ ಕೂಡ ಲಭ್ಯವಾಗುತ್ತದೆ. ಕೈದಿಗಳ ನಡುವೆ ಜಗಳ ಹುಟ್ಟಿಕೊಂಡಿತೆಂದರೆ ಡ್ರೋನ್ ಒದಗಿಸುವ ಫುಟೇಜ್ ನಿಂದ ನಮಗದು ಗೊತ್ತಾಗುತ್ತದೆ. ಆದರೆ ಯೋಜನೆಗೆ ಅದರದ್ದೇ ಆದ ಇತಿಮಿತಿಗಳಿವೆ. ಆದರೆ ನಾವು ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದೇ ಆದರೆ ಕೈದಿಗಳ ಸುರಕ್ಷತೆ ಕಾಪಾಡುವಲ್ಲಿ ಅದು ಬಹಳಷ್ಟು ನೆರವಾಗಲಿದೆ,’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಭ್ ಗುಪ್ತಾ ಹೇಳುತ್ತಾರೆ.

ಇದನ್ನೂ ಓದಿ:  ಕೇರಳದ ಈ ಪ್ರದೇಶ ಯಾವುದು ಎಂದು ಕಂಡುಹಿಡಿಯುವಿರಾ? ಇದೀಗ ಸಖತ್ ವೈರಲ್​​

ರಾತ್ರಿ ಸಮಯದ ಸರ್ವೇಕ್ಷಣೆಗಾಗಿಯೂ ಡ್ರೋನ್ ಗಳನ್ನು ಬಳಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಜೈಲಿನ ಆವರಣದಲ್ಲಿ ಏನು ನಡೆಯುತ್ತಿದೆ ಅಂತ ನಮಗೆ ಕೂಡಲೇ ಗೊತ್ತಾಗುತ್ತದೆ ಎಂದು ಗುಪ್ತಾ ಹೇಳುತ್ತಾರೆ.

‘ಪ್ರಾಯೋಗಿಕವಾಗಿ ಮೊದಲಿಗೆ ನಾವು 12 ಡ್ರೋನ್ ಗಳನ್ನು ಬಳಸಲಿದ್ದೇವೆ. ಅದಕ್ಕೂ ಮೊದಲು, ಕೈದಿಗಳ ಸುರಕ್ಷತೆ ಬಗ್ಗೆ ನಮಗೆ ಉತ್ತಮ ಮಾಹಿತಿ ಲಭ್ಯವಾಗಬೇಕಾದರೆ ನಮ್ಮ ಸಿಬ್ಬಂದಿಗೆ ಅವುಗಳನ್ನು ಬಳಸುವ ಬಗ್ಗೆ ತರಬೇತಿ ನೀಡಬೇಕಿದೆ, ಎರಡನೇಯದಾಗಿ ನಾವು ಡ್ರೋನ್ ಗಳನ್ನು ಕೈದಿಗಳ ಪ್ರಯೋಜನಕ್ಕಾಗಿ ಬಳಸಲಿದ್ದೇವೆ, ಕೈದಿಗಳಿಂದ ಪ್ರಮಾದ ಜರುಗದಂತೆ ನಿಗಾ ವಹಿಸುವುದು ನಮ್ಮ ಉದ್ದೇಶವಾಗಿದೆ,’ ಎಂದು ಅಮಿತಾಭ್ ಗುಪ್ತಾ ಹೇಳುತ್ತಾರೆ.

ಇದನ್ನೂ ಓದಿ:  ಈಶ್ವರಪ್ಪಗೆ ಪ್ರಧಾನಿ ದೂರವಾಣಿ ಕರೆ: ರಾಜಕೀಯ ನಡೆಗೆ ಪ್ರಶಂಸೆ ಜತೆಗೆ ಮಹತ್ವದ ಭರವಸೆ ನೀಡಿದ ಮೋದಿ

ಖಾಸಗಿ ಸಂಸ್ಥೆಯೊಂದರ ಸೇವೆಯನ್ನು ಬಂಧಿಖಾನೆ ಇಲಾಖೆ ಬಳಸಿಕೊಳ್ಳುತ್ತಿದ್ದು ಅದರ ಸಿಬ್ಬಂದಿಯು, ಪುಣೆಯ ಯರವಾಡ ಜೈಲಿನಲ್ಲಿ ಅಲ್ಲಿನ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ