ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿ, ಕಳ್ಳತನ; ಭಾರತದಿಂದ ಖಂಡನೆ
ಭಾರತವು ಈ ವಿಷಯವನ್ನು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಚರ್ಚಿಸಿದೆ. ಪ್ರತಿಮೆಯನ್ನು ಕಳ್ಳತನ ಮಾಡಿದವರನ್ನು ತಕ್ಷಣ ಹುಡುಕಲು ಒತ್ತಾಯಿಸಲಾಗಿದೆ. ದಿ ಆಸ್ಟ್ರೇಲಿಯಾ ಟುಡೇ ಪ್ರಕಾರ, ಈ ಪ್ರತಿಮೆಯನ್ನು ನವದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ICCR) ಉಡುಗೊರೆಯಾಗಿ ನೀಡಿತ್ತು. ಇದನ್ನು 12 ನವೆಂಬರ್ 2021ರಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮಾರಿಸನ್ ಉದ್ಘಾಟಿಸಿದ್ದರು.
ನವದೆಹಲಿ, ಫೆಬ್ರವರಿ 3: ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕತ್ತರಿಸಿ ಕದಿಯಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಾರತ ಒತ್ತಾಯಿಸಿದೆ. ಮೆಲ್ಬೋರ್ನ್‌ನ ರೌವಿಲ್ಲೆಯಲ್ಲಿರುವ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್‌ನಲ್ಲಿರುವ ಮಹಾತ್ಮ ಗಾಂಧಿಯವರ (Mahatma Gandhi) ಕಂಚಿನ ಪ್ರತಿಮೆಯನ್ನು ಕದಿಯಲಾಗಿದೆ.
ಈ ಘಟನೆಗೆ ಭಾರತದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತವು ಈ ವಿಷಯವನ್ನು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಚರ್ಚಿಸಿದೆ. ಪ್ರತಿಮೆಯನ್ನು ಕಳ್ಳತನ ಮಾಡಿದವರನ್ನು ತಕ್ಷಣ ಹುಡುಕಲು ಒತ್ತಾಯಿಸಲಾಗಿದೆ. ದಿ ಆಸ್ಟ್ರೇಲಿಯಾ ಟುಡೇ ಪ್ರಕಾರ, ಈ ಪ್ರತಿಮೆಯನ್ನು ನವದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ICCR) ಉಡುಗೊರೆಯಾಗಿ ನೀಡಿತ್ತು. ಇದನ್ನು 12 ನವೆಂಬರ್ 2021ರಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮಾರಿಸನ್ ಉದ್ಘಾಟಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

