Video: ಇಂಡೋನೇಷ್ಯಾದಲ್ಲಿ ಸುನಾಮಿಗಿಂತ ತೀವ್ರವಾದ ಪ್ರವಾಹ, ನೋಡ ನೋಡುತ್ತಲೇ ಕುಸಿದೇ ಹೋಯ್ತು ರಸ್ತೆ
ಇಂಡೋನೇಷ್ಯಾದಲ್ಲಿ ಸುನಾಮಿಗಿಂತ ಭೀಕರ ಪ್ರವಾಹ ಎದುರಾಗಿದೆ. ನೋಡ ನೋಡುತ್ತಲೇ ರಸ್ತೆಯೊಂದು ಕುಸಿದಿರುವ ವಿಡಿಯೋ ವೈರಲ್ ಆಗಿದೆ. ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ಇಂಡೋನೇಷ್ಯಾ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ಮಲೇಷ್ಯಾದಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಏಷ್ಯಾದ ಕೆಲವು ಭಾಗಗಳು ತತ್ತರಿಸಿವೆ. ಈ ವಿಪತ್ತು ಈ ಪ್ರದೇಶದಲ್ಲಿನ ತೀವ್ರ ಆರ್ಥಿಕ ಅಸಮಾನತೆಗಳನ್ನು ಎತ್ತಿ ತೋರಿಸಿದೆ.ಇಂಡೋನೇಷ್ಯಾ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ್ದು, ಕನಿಷ್ಠ 753 ಸಾವುಗಳನ್ನು ದಾಖಲಿಸಿದೆ, ನಂತರ ಶ್ರೀಲಂಕಾ 465 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಜಕಾರ್ತಾ, ಡಿಸೆಂಬರ್ 04: ಇಂಡೋನೇಷ್ಯಾದಲ್ಲಿ ಸುನಾಮಿಗಿಂತ ಭೀಕರ ಪ್ರವಾಹ ಎದುರಾಗಿದೆ. ನೋಡ ನೋಡುತ್ತಲೇ ರಸ್ತೆಯೊಂದು ಕುಸಿದಿರುವ ವಿಡಿಯೋ ವೈರಲ್ ಆಗಿದೆ. ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ಇಂಡೋನೇಷ್ಯಾ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ಮಲೇಷ್ಯಾದಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಏಷ್ಯಾದ ಕೆಲವು ಭಾಗಗಳು ತತ್ತರಿಸಿವೆ. ಈ ವಿಪತ್ತು ಈ ಪ್ರದೇಶದಲ್ಲಿನ ತೀವ್ರ ಆರ್ಥಿಕ ಅಸಮಾನತೆಗಳನ್ನು ಎತ್ತಿ ತೋರಿಸಿದೆ.ಇಂಡೋನೇಷ್ಯಾ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ್ದು, ಕನಿಷ್ಠ 753 ಸಾವುಗಳನ್ನು ದಾಖಲಿಸಿದೆ, ನಂತರ ಶ್ರೀಲಂಕಾ 465 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸೋಮವಾರ ವಿಪತ್ತು ವಲಯಕ್ಕೆ ಭೇಟಿ ನೀಡಿ, ಪುನರ್ನಿರ್ಮಾಣಕ್ಕೆ ನೆರವು ಮತ್ತು ಬೆಂಬಲ ನೀಡುವ ಭರವಸೆ ನೀಡಿದರು, ಆದರೂ ಅವರು ಇನ್ನೂ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

