ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಗಂಡನೇ ಇರಿದು ಕೊಂದಿರುವ ಆರೋಪ, ಅರೋಪಿ ನಾಪತ್ತೆ

Updated on: May 28, 2025 | 6:25 PM

ದೃಶ್ಯಗಳಲ್ಲಿ ಕಾಣುತ್ತಿರೋದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ, ಕೀರ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿಗೆ ತರಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಮೃತಳ ಸಂಬಂಧಿಕರು ರೋದಿಸುತ್ತಿದ್ದಾರೆ. ಕೀರ್ತಿಯ ಮಾತೃಭಾಷೆ ತಮಿಳು ಇರಬಹುದು ಅನಿಸುತ್ತದೆ, ಆಕೆಯ ಸಂಬಂಧಿಕರು ಅದೇ ಭಾಷೆಯಲ್ಲಿ ಮಾತಾಡುತ್ತಿದ್ದಾರೆ. ಅದು ಸರಿ, ಕೀರ್ತಿ-ಅವಿನಾಶ್ ಹುಟ್ಟಿಸಿದ ಮಗುವಿನ ಗತಿಯೇನು? ಅಮ್ಮ ಇಲ್ಲ, ಅಪ್ಪ ನಾಪತ್ತೆ; ಮಗು ಅನಾಥ!

ಚಿಕ್ಕಮಗಳೂರು, ಮೇ 28: ಚಿಕ್ಕಮಗಳೂರು ತಾಲೂಕಿನ ಕೈಮರ ಗ್ರಾಮದಲ್ಲಿ ಕೀರ್ತಿ (26) ಹೆಸರಿನ ಯುವತಿಯನ್ನು ಅವಿನಾಶ್ (Avinash) ಎನ್ನುವ ವ್ಯಕ್ತಿ ಸುಮಾರು 4 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಾನೆ ಮತ್ತು ಇವರಿಬ್ಬರ ಪ್ರೀತಿಯ ಕುರುಹಾಗಿ ಎರಡೂವರೆ ವರ್ಷದ ಮಗುವಿದೆ. ಆದರೆ ಕಳೆದ ಕೆಲ ದಿನಗಳಿಂದ ದಂಪತಿ ನಡುವೆ ಜಗಳ ಬರಲು ಶುರುವಾಗಿದೆ. ಆದರೆ ಇವತ್ತು ಜಗಳ ವಿಕೋಪಕ್ಕೆ ಹೋಗಿ ಅವಿನಾಶ್ ಕೀರ್ತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಕೀರ್ತಿಯ ಸಂಬಂಧಿಕರು ಅರೋಪಿಸುತ್ತಿದ್ದಾರೆ. ಆರೋಪ ಹೊತ್ತಿರುವ ಅವಿನಾಶ್ ಪರಾರಿಯಾಗಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  ತನಗಿಷ್ಟವಿಲ್ಲದ ಹೇರ್​ಕಟ್ ಮಾಡಿಸಿದ್ದಕ್ಕೆ ಪ್ರೇಯಸಿಯನ್ನು ಇರಿದು ಕೊಂದ ಪಾಗಲ್ ಪ್ರೇಮಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ