Chikhale Falls: ಫಾಲ್ಸ್ ನೋಡಲು ಹೋಗಿ ಬೈಕ್ ಸಮೇತ ಪ್ರಪಾತಕ್ಕೆ ಬಿದ್ದ ವ್ಯಕ್ತಿ, ಮುಂದೇನಾಯ್ತು?

| Updated By: ಆಯೇಷಾ ಬಾನು

Updated on: Feb 20, 2024 | 9:20 AM

ಖಾನಾಪುರ ಗೋವಾ ಗಡಿ ಭಾಗದಲ್ಲಿರುವ ಪ್ರಸಿದ್ಧ ಚಿಕಲೆ ಫಾಲ್ಸ್ ನೋಡಲು ಸ್ನೇಹಿತರ ಜೊತೆಗೆ ಬಂದಿದ್ದಾಗ ವಿನಾಯಕ ಎಂಬುವವರು ಆಯಾ ತಪ್ಪಿ ಬೈಕ್ ಸಮೇತ ಪ್ರಪಾತಕ್ಕೆ ಬಿದ್ದಿ ಘಟನೆ ನಡೆದಿದೆ. ಸದ್ಯ ಸ್ನೇಹಿತರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳೀಯರ ಸಹಾಯದ ಮೇರೆಗೆ ವಿನಾಯಕ್​ನನ್ನು ರಕ್ಷಿಸಿದ್ದಾರೆ.

ಬೆಳಗಾವಿ, ಫೆ.20: ಜಿಲ್ಲೆಯ ಖಾನಾಪುರ ತಾಲೂಕಿನ ಚಿಕಲೆ ಗ್ರಾಮದ ಫಾಲ್ಸ್​​​ ನೋಡಲು ಹೋಗಿ ಬೈಕ್ ಸಮೇತ 100 ಅಡಿ ಪ್ರಪಾತಕ್ಕೆ ಬಿದ್ದಿದ್ದ ಸವಾರನನ್ನು ರಕ್ಷಿಸಲಾಗಿದೆ. ಬೆಳಗಾವಿ ಕ್ಯಾಂಪ್ ಪ್ರದೇಶದ ವಿನಾಯಕ ಬುತ್ತುಲ್ಕರ್ ರಕ್ಷಣೆ ಮಾಡಲಾದ ವ್ಯಕ್ತಿ. ಖಾನಾಪುರ ಗೋವಾ ಗಡಿ ಭಾಗದಲ್ಲಿರುವ ಪ್ರಸಿದ್ಧ ಚಿಕಲೆ ಫಾಲ್ಸ್ ನೋಡಲು ಸ್ನೇಹಿತರ ಜೊತೆಗೆ ಬಂದಿದ್ದಾಗ ವಿನಾಯಕ ಬೈಕ್ ಸಮೇತ ಪ್ರಪಾತಕ್ಕೆ ಬಿದ್ದಿದ್ದರು. ಬೈಕ್ ಮೇಲೆ ಹೋಗುವಾಗ ಆಯತಪ್ಪಿ ನೂರು ಅಡಿ ಪ್ರಪಾತಕ್ಕೆ ಬಿದ್ದಿದ್ದರು. ಇದನ್ನು ಗಮನಿಸಿದ್ದ ಸ್ನೇಹಿತರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಹುಡುಕಾಟ ನಡೆಸಿ ವಿನಾಯಕ್​ನನ್ನು ರಕ್ಷಣೆ ಮಾಡಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿನಾಯಕ್​ಗೆ ಮುಖ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ