AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮಗ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ: ಕೆಎಸ್ ಈಶ್ವರಪ್ಪ, ಬಿಜೆಪಿ ನಾಯಕ

ನನ್ನ ಮಗ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ: ಕೆಎಸ್ ಈಶ್ವರಪ್ಪ, ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 20, 2024 | 10:43 AM

Share

ಮರಳಿ ಯತ್ನವ ಮಾಡು ಎನ್ನುವಂತೆ ಈಶ್ವರಪ್ಪ ಈಗ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ವರಿಷ್ಠರ ದುಂಬಾಲು ಬಿದ್ದಿದ್ದಾರೆ ಮತ್ತು ಕಾಂತೇಶ್ ಅಲ್ಲಿ ಓಡಾಟ ಕೂಡ ನಡೆಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಬಸವರಾಜ ಬೊಮ್ಮಾಯಿ ಸಹ ತಮ್ಮ ಮಗನಿಗೆ ಟಿಕೆಟ್ ಗಿಟ್ಟಿಸುವ ಭರಪೂರ ಪ್ರಯತ್ನ ನಡೆಸಿದ್ದಾರೆ.

ದಾವಣಗೆರೆ: ಡೈನಾಸ್ಟಿಕ್ ಪಾಲಿಟಿಕ್ಸ್ (dynastic politics) ಅಥವಾ ವಂಶ ರಾಜಕಾರಣವನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸುತ್ತದೆ ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳುತ್ತದೆ ಅನ್ನೋದು ಬೇರೆ ವಿಚಾರ. ರಾಜ್ಯದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಸಹ ವಂಶ ರಾಜಕಾರಣವನ್ನು ಬಲವಾಗಿ ವಿರೋಧಿಸುತ್ತಿದ್ದರು, ಆದರೆ ತಮ್ಮ ವಿಚಾರಕ್ಕೆ ಬಂದಾಗ ನಿಲುವು ಬದಲಾಯಿಸುತ್ತಾರೆ. ವರಿಷ್ಠರು ಅವರಿಗೆ ವಿಧಾನಸಭಾ ಟಿಕೆಟ್ ನಿರಾಕರಿಸಿದಾಗ ಮಗ ಕಾಂತೇಶ್ ಗಾಗಿ (Kanthesh) ಟಿಕೆಟ್ ಕೇಳಿದ್ದರು ಮತ್ತು ಹಟ ಕೂಡ ಸಾಧಿಸಿದ್ದರು. ಆದರೆ ಹೈಕಮಾಂಡ್ ಚನ್ನಬಸ್ಸಪ್ಪಗೆ ಟಿಕೆಟ್ ನೀಡಿತು ಮತ್ತು ಅವರು ಆಯ್ಕೆ ಕೂಡ ಆಗಿದ್ದಾರೆ. ನಿಮಗೆ ನೆನಪಿರಬಹುದು, ಟಿಕೆಟ್ ಘೋಷಣೆಯಾದ ದಿನ ಚನ್ನಬಸ್ಸಪ್ಪ ಆಶೀರ್ವಾದ ಪಡೆಯಲು ಈಶ್ವರಪ್ಪನವರ ಮನೆಗೆ ಹೋಗಿದ್ದರು.

ಕಾಲು ಮುಟ್ಟಿ ನಮಸ್ಕರಿಸಿದ ಚನ್ನಬಸ್ಸಪ್ಪಗೆ ಈಶ್ವರಪ್ಪ ಒಲ್ಲದ ಮನಸ್ಸಿನಿಂದ ಆಶೀರ್ವದಿಸಿದ್ದರು, ಅದರೆ ಅವರು ಶ್ರೀಮತಿಯವರ ಪಾದ ಮುಟ್ಟಲು ಹೋದಾಗ ಅವರು ದುರ್ದಾನ ತೆಗೆದುಕೊಂಡವರಂತೆ ದುರುದುರು ಒಳನಡೆದು ಹೋಗಿದ್ದರು. ಮರಳಿ ಯತ್ನವ ಮಾಡು ಎನ್ನುವಂತೆ ಈಶ್ವರಪ್ಪ ಈಗ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ವರಿಷ್ಠರ ದುಂಬಾಲು ಬಿದ್ದಿದ್ದಾರೆ ಮತ್ತು ಕಾಂತೇಶ್ ಅಲ್ಲಿ ಓಡಾಟ ಕೂಡ ನಡೆಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಬಸವರಾಜ ಬೊಮ್ಮಾಯಿ ಸಹ ತಮ್ಮ ಮಗನಿಗೆ ಟಿಕೆಟ್ ಗಿಟ್ಟಿಸುವ ಭರಪೂರ ಪ್ರಯತ್ನ ನಡೆಸಿದ್ದಾರೆ. ಟಿಕೆಟ್ ಯಾರಿಗೆ ಸಿಕ್ಕರೂ ಗೆಲುವಿಗಾಗಿ ಒಟ್ಟಾಗಿ ಶ್ರಮಿಸುತ್ತೇವೆ ಅಂತ ದೇಶಾವರಿ ಮಾತನ್ನು ಈಶ್ವರಪ್ಪ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ