Video: ರೈಲಿನಲ್ಲಿ ಪ್ರಯಾಣಿಕರು ತಿಂದು ಬಿಸಾಡಿದ್ದ ಬಾಕ್ಸ್​​ ತೊಳೆಯುವಾಗ ಸಿಕ್ಕಿಬಿದ್ದ ರೈಲ್ವೆ ಕ್ಯಾಂಟೀನ್ ಸಿಬ್ಬಂದಿ

Updated on: Oct 19, 2025 | 12:54 PM

ರೈಲಿನಲ್ಲಿ ಪ್ರಯಾಣಿಕರು ತಿಂದು ಬಿಸಾಡಿದ್ದ ಬಾಕ್ಸ್​​ಗಳನ್ನು ತೊಳೆದು ಮತ್ತದೇ ಬಾಕ್ಸ್​​ನಲ್ಲಿ ಆಹಾರವನ್ನು ತುಂಬುವ ಪ್ರಯತ್ನ ಮಾಡುತ್ತಿದ್ದ ವ್ಯಕ್ತಿಯೊಬ್ಬ ರೈಲಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಬಿಸಾಡಬೇಕಿದ್ದ ಬಾಕ್ಸ್​​ಗಳನ್ನು ತೊಳೆಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ. ಈರೋಡ್-ಜೋಗಬಾನಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16601) ರೈಲಿನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಬಳಸಿ ಬಿಸಾಡಿದ ಬಾಕ್ಸ್​ ತೊಳೆದಿದ್ದಾರೆ.

ತಮಿಳುನಾಡು, ಅಕ್ಟೋಬರ್ 19: ರೈಲಿನಲ್ಲಿ ಪ್ರಯಾಣಿಕರು ತಿಂದು ಬಿಸಾಡಿದ್ದ ಬಾಕ್ಸ್​​ಗಳನ್ನು ತೊಳೆದು ಮತ್ತದೇ ಬಾಕ್ಸ್​​ನಲ್ಲಿ ಆಹಾರವನ್ನು ತುಂಬುವ ಪ್ರಯತ್ನ ಮಾಡುತ್ತಿದ್ದ ವ್ಯಕ್ತಿಯೊಬ್ಬ ರೈಲಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಬಿಸಾಡಬೇಕಿದ್ದ ಬಾಕ್ಸ್​​ಗಳನ್ನು ತೊಳೆಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ. ಈರೋಡ್-ಜೋಗಬಾನಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16601) ರೈಲಿನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಬಳಸಿ ಬಿಸಾಡಿದ ಬಾಕ್ಸ್​ ತೊಳೆದಿದ್ದಾರೆ.

ಭಾರತೀಯ ರೈಲುಗಳಲ್ಲಿನ ನೈರ್ಮಲ್ಯ ಮಾನದಂಡಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ರೈಲ್ವೆ ಕ್ಯಾಂಟೀನ್ ಸಿಬ್ಬಂದಿಯೊಂದಿಗೆ ಕೆಲಸ ಮಾಡುವ ಉದ್ಯೋಗಿ ವಾಶ್‌ಬೇಸಿನ್‌ನಲ್ಲಿ ಬಿಸಾಡಬಹುದಾದ ಪ್ಲಾಸ್ಟಿಕ್ ಊಟದ ಟ್ರೇಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಅವುಗಳನ್ನು ಅಚ್ಚುಕಟ್ಟಾಗಿ ರಾಶಿಯಲ್ಲಿ ಜೋಡಿಸಿ, ಮರುಬಳಕೆಗೆ ಸಿದ್ಧಪಡಿಸುತ್ತಿರುವುದನ್ನು ಕಾಣಬಹುದು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ