ಮಂಡ್ಯದ ಈರೇಗೌಡ ತಲಾ ಸುಮಾರು ಮೂರು ಕೇಜಿ ತೂಕದ 10 ಮುದ್ದೆ ನಾಟಿಕೋಳಿ ಸಾರಿನ ಜೊತೆ ಹೊಟ್ಟೆಗಿಳಿಸಿ ಪ್ರಥಮ ಸ್ಥಾನ ಗಿಟ್ಟಿಸಿದರು!

|

Updated on: Jan 02, 2024 | 7:23 PM

ಮುದ್ದೆ ತಿನ್ನುವ ಪ್ರಸ್ತಾಪವಾದಾಗ ಮಂಡ್ಯದ ವ್ಯಕ್ತಿಯೊಬ್ಬರು ನೆನಪಾಗುತ್ತಾರೆ ಆದರೆ ಅವರ ಹೆಸರು ನೆನಪಾಗುತ್ತಿಲ್ಲ. ಅವರು ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದರು. ನಲ್ವತ್ತು ಮುದ್ದೆ ತಿಂದ ನಂತರವೂ ಅವರು ಇನ್ನೂ ಬೇಕು ಅನ್ನುತ್ತಿದ್ದರು. ಆ ವ್ಯಕ್ತಿ ಚಿಕಿತ್ಸೆಗಾಗಿ ಅಸ್ಪತ್ರೆಗೆ ದಾಖಲಿಸಿದ ಕೆಲವೇ ದಿನಗಳ ಬಳಿಕ ನಿಧನಹೊಂದಿದ್ದರು.

ಮಂಡ್ಯ: ಮೀಸೆ (mustache) ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್… ಹಾಡನ್ನು ನೀವು ಕೇಳಿರುತ್ತೀರಿ. ಮೀಸೆ ಹತ್ತ ಬೇರೆ ಗಂಡಸರ ವಿಷಯ ಗೊತ್ತಿಲ್ಲ ಮಾರಾಯ್ರೇ ಆದರೆ ಭರ್ಜರಿ ಬಿಳಿ ಮೀಸೆ ಹೊತ್ತ ಈ ಈರೇಗೌಡರಿಗೆ (Eregowda) ಇವತ್ತು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಫುಲ್ ಡಿಮ್ಯಾಂಡ್! ಭವನದಲ್ಲಿ ಸಿರಿಧಾನ್ಯ ಹಬ್ಬದ ಅಂಗವಾಗಿ ನಾಟಿ ಕೋಳಿ ಸಾರಿನ ಜೊತೆ ರಾಗಿಮುದ್ದೆ (ragi balls) ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಮಹಾಶಯ ತಿಂದಿದ್ದು ಎಷ್ಟು ಮುದ್ದೆ ಗೊತ್ತಾ? ಒದೊಂದು ಎರಡೂ ಮುಕ್ಕಾಲು ಕೇಜಿ ತೂಕದ ಒಟ್ಟು 10 ಮುದ್ದೆ! 62-ವರ್ಷ ವಯಸ್ಸಿನ ‘ಮುದ್ದೇ’ಗೌಡರು ಕಳೆದ 9 ವರ್ಷಗಳಿಂದ ಮುದ್ದೆ ತಿನ್ನುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು, ಭಾಗಿಯಾದ ಎಲ್ಲ ಸ್ಪರ್ಧೆಗಳಲ್ಲೂ (ಒಟ್ಟು 14 ಪ್ರಶಸ್ತಿ) ಫಸ್ಟ್ ಪ್ರೈಜ್ ಅಂತೆ! ಇಲ್ಲಿ ಅವರು 10 ಮುದ್ದೆ ಹೊಟ್ಟೆಗಿಳಿಸಿ 11 ನೇಯದಕ್ಕೆ ಕೈಹಾಕಿದಾಗ ತಿನ್ನಲು ನಿಗದಿಯಾಗಿದ್ದ ಸಮಯ ಮುಗಿಯಿತಂತೆ. ಅಂದಹಾಗೆ, ಇದೇ ಸ್ಪರ್ಧೆಯಲ್ಲಿ ಒಂದೊಂದು 1.652 ಕೇಜಿ ತೂಕದ 6 ಮುದ್ದೆ ಗುಳುಂ ಮಾಡಿದ ದಿಲೀಪ್ ಮತ್ತು 1.54 ಕೇಜಿ ತೂಕದ 6 ಮುದ್ದೆ ಸೇವಿಸಿದ ರವೀಂದ್ರ ಮೂರನೇ ಸ್ಥಾನ ಪಡೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ