ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಇದು: ವಿಡಿಯೋ ನೋಡಿ

| Updated By: Skanda

Updated on: Aug 06, 2021 | 9:10 AM

ಈ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದ್ದು, ಹಳಿಗೆ ಬಿದ್ದಾತನನ್ನು ದೇವರಂತೆ ಬಂದ ವ್ಯಕ್ತಿಯೊಬ್ಬ ಬಚಾವು ಮಾಡಿದ್ದಾನೆ. ರೈಲಿನ ಹಾರ್ನ್​ ಒಂದೆಡೆ ಕೇಳುತ್ತಿದ್ದರೆ ಅಲ್ಲಿ ಜಮಾಯಿಸಿದ್ದವರೆಲ್ಲಾ ಆತಂಕಿತರಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದರು.

ಕೆಲವೊಮ್ಮೆ ಕಣ್ಣಲ್ಲಿ ನೋಡಿದ್ದರೂ ನಂಬಲು ಕಷ್ಟವಾಗುವಂತಹ ಅಚ್ಚರಿಗಳು ಘಟಿಸಿಬಿಡುತ್ತವೆ. ಅದೊಂದು ರೀತಿಯಲ್ಲಿ ಊಹೆಗೂ ಮೀರಿದ ವಿಚಾರ. ಹಾಗಾಗಿ ಅಂತಹ ಘಟನೆಗಳಿಗೆ ಮನುಷ್ಯರೇ ಕಾರಣರಾಗಿದ್ದರೂ ದೇವರೇ ಆ ರೂಪದಲ್ಲಿ ಬಂದಿದ್ದು ಎಂದು ಉದ್ಘರಿಸುತ್ತೇವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ವಿಡಿಯೋ ಒಂದಕ್ಕೆ ಇಂತಹದ್ದೇ ಪ್ರತಿಕ್ರಿಯೆಗಳು ಬರುತ್ತಿವೆ. ವೀಲ್​ ಚೇರ್​ನಲ್ಲಿದ್ದ ವ್ಯಕ್ತಿ ಪ್ಲಾಟ್​ಫಾರ್ಮ್​ನಿಂದ ಆಕಸ್ಮಿಕವಾಗಿ ರೈಲ್ವೇ ಟ್ರ್ಯಾಕ್​ ಮೇಲೆ ಬಿದ್ದಾಗ ಅತ್ತ ಶರವೇಗದ ರೈಲು ಆಗಮಿಸುವ ಸದ್ದು ಕೇಳುತ್ತಿದ್ದರೆ ಇತ್ತ ಪವಾಡ ಸದೃಶ ರೀತಿಯಲ್ಲಿ ಅವನನ್ನು ಬಚಾವು ಮಾಡಲಾಗಿದೆ.

ಈ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದ್ದು, ಹಳಿಗೆ ಬಿದ್ದಾತನನ್ನು ದೇವರಂತೆ ಬಂದ ವ್ಯಕ್ತಿಯೊಬ್ಬ ಬಚಾವು ಮಾಡಿದ್ದಾನೆ. ರೈಲಿನ ಹಾರ್ನ್​ ಒಂದೆಡೆ ಕೇಳುತ್ತಿದ್ದರೆ ಅಲ್ಲಿ ಜಮಾಯಿಸಿದ್ದವರೆಲ್ಲಾ ಆತಂಕಿತರಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದರು. ರೈಲ್ವೇ ಟ್ರ್ಯಾಕ್​ ಮೇಲೆ ಬಿದ್ದವನನ್ನು ಎತ್ತಲೆಂದು ವ್ಯಕ್ತಿಯೋರ್ವ ಧಾವಿಸಿದಾಗ ಅಲ್ಲಿ ಇಬ್ಬರ ಜೀವವೂ ಅಪಾಯದಲ್ಲಿದ್ದಂತೆಯೇ ಆಗಿತ್ತು. ಆ ಭಯ ಸುತ್ತ ನೆರೆದಿದ್ದವರ ಕಣ್ಣಲ್ಲೂ ಗೋಚರಿಸುತ್ತಿತ್ತು. ಆದರೆ, ಮಿಂಚಿನ ವೇಗದಲ್ಲಿ ಬರುತ್ತಿದ್ದ ರೈಲಿಗೇ ಸೆಡ್ಡು ಹೊಡೆಯುವಂತೆ ತ್ವರಿತವಾಗಿ ಅಲ್ಲಿ ರಕ್ಷಣಾ ಕಾರ್ಯ ನಡೆದುಹೋಗಿದೆ. ರೈಲು ಬರುವುದಕ್ಕೆ ಕೆಲ ಸೆಕೆಂಡುಗಳ ಮುಂಚೆಯೇ ಇಬ್ಬರೂ ಸುರಕ್ಷಿತವಾಗಿ ಮೇಲೆ ಬಂದಿದ್ದಾರೆ. ಉಸಿರು ಬಿಗಿಹಿಡಿದುಕೊಂಡು ಈ ವಿಡಿಯೋವನ್ನೊಮ್ಮೆ ನೋಡಿಬಿಡಿ.

ಇದನ್ನೂ ನೋಡಿ:
Viral Video: ಚಲಿಸುತ್ತಿದ್ದ ರೈಲು ಹತ್ತಲು ಮುಂದಾದ ಮಹಿಳೆ;ಆಮೇನಾಯ್ತು?

Follow us on