Video: ಅಯ್ಯೋ ನನ್ನ ಹಣ ಕೊಡದೆ ಹೋದ್ಯಲ್ಲೋ ಎಂದು ಸ್ನೇಹಿತನ ಚಿತೆಗೆ ಕೋಲಿನಿಂದ ಹೊಡೆದ ವ್ಯಕ್ತಿ

Updated on: Sep 27, 2025 | 11:19 AM

ತನ್ನ ಬಳಿ ತೆಗೆದುಕೊಂಡಿದ್ದ 50 ಸಾವಿರ ರೂ. ಹಣ ವಾಪಸ್ ಕೊಡದೆ ಸ್ನೇಹಿತ ಸತ್ತಿದ್ದಕ್ಕೆ ಕೋಪಗೊಂಡು ಚಿತೆಗೆ ಕೋಲಿನಿಂದ ಹೊಡೆದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಯ್ಯೋ ನನ್ನ ಹಣ ಕೊಡದೇ ಹೋದ್ಯಲ್ಲೋ ಎನ್ನುತ್ತಾ ಚಿತೆಗೆ ಕೋಲಿನಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಗ್ರಾಮದ ಸ್ಮಶಾನದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಉತ್ತರ ಪ್ರದೇಶ, ಸೆಪ್ಟೆಂಬರ್ 27: ತನ್ನ ಬಳಿ ತೆಗೆದುಕೊಂಡಿದ್ದ 50 ಸಾವಿರ ರೂ. ಹಣ ವಾಪಸ್ ಕೊಡದೆ ಸ್ನೇಹಿತ ಸತ್ತಿದ್ದಕ್ಕೆ ಕೋಪಗೊಂಡು ಚಿತೆಗೆ ಕೋಲಿನಿಂದ ಹೊಡೆದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಯ್ಯೋ ನನ್ನ ಹಣ ಕೊಡದೇ ಹೋದ್ಯಲ್ಲೋ ಎನ್ನುತ್ತಾ ಚಿತೆಗೆ ಕೋಲಿನಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಗ್ರಾಮದ ಸ್ಮಶಾನದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.ಮೃತರ ಪತ್ನಿ ಮತ್ತು ಮಕ್ಕಳು ಚಿತೆಯ ಬಳಿ ನಿಂತಿದ್ದು, ಕುಟುಂಬವು ಶೋಕದಲ್ಲಿ ಮುಳುಗಿದ್ದರು.

ಚಿತೆಯ ಬೆಂಕಿ ಆಕಾಶದೆತ್ತರಕ್ಕೆ ಹೋಗುತ್ತಿತ್ತು. ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಆ ಚಿತೆಗೆ ಕೋಲಿನಿಂದ ಹೊಡೆಯಲು ಆರಂಭಿಸುತ್ತಾನೆ. ಮೃತ ವ್ಯಕ್ತಿ ಆ ವ್ಯಕ್ತಿಯಿಂದ 50,000 ರೂ. ಸಾಲ ಪಡೆದಿದ್ದ, ಆದರೆ ಮರು ಪಾವತಿಸದೇ ಸಾವನ್ನಪ್ಪಿದ್ದಾರೆ. ಆತನಿಗೆ ಸ್ನೇಹಿತ ಸತ್ತಿರುವ ನೋವಿಗಿಂತ ಆತ ಹಣ ಕೊಡದೆ ಸತ್ತನಲ್ಲ ಎನ್ನುವ ಬೇಸರವೇ ಹೆಚ್ಚಿದ್ದಂತೆ ತೋರುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 27, 2025 11:12 AM