AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಅಧಿಕಾರಿಗಳನ್ನೇ ಕೂಡಿಹಾಕಿದ ಗ್ರಾಮಸ್ಥರು; ವೀಡಿಯೋ ವೈರಲ್!

ದಾವಣಗೆರೆ: ಅಧಿಕಾರಿಗಳನ್ನೇ ಕೂಡಿಹಾಕಿದ ಗ್ರಾಮಸ್ಥರು; ವೀಡಿಯೋ ವೈರಲ್!

ಭಾವನಾ ಹೆಗಡೆ
|

Updated on:Sep 27, 2025 | 10:57 AM

Share

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹನಮಂತಾಪುರದಲ್ಲಿ ಪಿಡಿಓರನ್ನೇ ಕೂಡಿಹಾಕಿರುವ ಘಟನೆ ನಡೆದಿದೆ. ಗ್ರಾಮದಲ್ಲಿರುವ ನೀರಿನ ಸಮಸ್ಯೆ ಮತ್ತು ಕೊಳಚೆ ಚರಮಡಿಗಳ ಸಮಸ್ಯೆಗೆ ಬೇಸತ್ತ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. 7.43 ಲಕ್ಷ ರೂಪಾಯಿ ಹಣವನ್ನು ವಿವಿಧ ಕಾಮಗಾರಿಗೆ ಬಿಡುಗಡೆ ಮಾಡಿದರೂ ಯಾವುದೇ ಬೆಳವಣಿಗೆಯಾಗದ ಕಾರಣ ಗ್ರಾಮ ಪಮಚಾಯಿತಿಯ ಪಿಡಿಓರನ್ನು ಕೂಡಿಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೋ ವೈರಲ್ ಆಗಿದೆ.

ದಾವಣಗೆರೆ, ಸೆಪ್ಟೆಂಬರ್ 27: ಇತ್ತೀಚೆಗೆ ಚಾಮರಾಜನಗರದಲ್ಲಿ ಹುಲಿ ಹಿಡಿಯುವಲ್ಲಿ ವಿಫಲರಾದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬೋನ್​ನಲ್ಲಿ ಗ್ರಾಮಸ್ಥರು ಕೂಡಿಹಾಕಿದ್ದರು. ಇದೀಗ ಅದೇ ರೀತಿ ಹೋಲುವ ಘಟನೆಯೊಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹನಮಂತಾಪುರದಲ್ಲಿ ನಡೆದಿದೆ. ಕುಡಿಯುವ ನೀರು ಮತ್ತು ಚರಂಡಿ ಸ್ವಚ್ಚಗೊಳಿಸದೇ ಇರುವುದರಿಂದ ಆಕ್ರೋಶಗೊಂಡ ಇಲ್ಲಿನ ಗ್ರಾಮಸ್ಥರು ತಾ. ಪಂ ಇಓ ಕೆಂಚಪ್ಪ ಹಾಗೂ ಹನಮಂತಾಪುರ ಪಿಡಿಓ ಓಬಣ್ಣರನ್ನು ಕೋಣೆಯೊಳಗೆ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್​ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Sep 27, 2025 10:55 AM