ಮೈಸೂರು ರೈತ ದಸರಾ: ಗ್ರಾಮೀಣ ಕ್ರೀಡೆಗಳ ಸೊಬಗಿಗೆ ಮನಸೋತ ಜನ
ಮೈಸೂರಿನ ಜೆ.ಕೆ. ಮೈದಾನದಲ್ಲಿ ನಡೆಯುತ್ತಿರುವ ರೈತ ದಸರಾ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯಿತು. ಕೃಷಿ ಮತ್ತು ಪಶುಸಂಗೋಪನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ರಾಜ್ಯದ ವಿವಿಧ ಭಾಗಗಳ 15 ಹಸುಗಳು ಪಾಲ್ಗೊಂಡಿದ್ದವು. ಗ್ರಾಮೀಣ ಕ್ರೀಡೆಯ ಸೊಬಗು ನೋಡುಗರ ಕಣ್ಮನ ಸೆಳೆಯಿತು.
ಮೈಸೂರು, ಸೆಪ್ಟೆಂಬರ್ 27: ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಸಂಭ್ರಮದ ಪ್ರಯುಕ್ತ ನಗರದ ಜೆ.ಕೆ. ಮೈದಾನದಲ್ಲಿ ನಡೆಯುತ್ತಿರುವ ರೈತ ದಸರಾ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳ 15 ಹಸುಗಳು ಪಾಲ್ಗೊಂಡಿದ್ದವು. ಬೆಳಗ್ಗೆ ಮತ್ತು ಸಂಜೆ ವೇಳೆ ಹಸು ನೀಡುವ ಹಾಲಿನ ಪ್ರಮಾಣದ ಆಧಾರದ ಮೇಲೆ ಸ್ಪರ್ಧೆಯ ವಿಜೇತರನ್ನು ನಿರ್ಧರಿಸಲಾಗುತ್ತದೆ.ಕೃಷಿ ಮತ್ತು ಪಶುಸಂಗೋಪನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

