ಇನ್ಮುಂದೆ ಪೆಟ್ರೋಲ್​​ಗೆ 20% ಎಥನಾಲ್ ಮಿಕ್ಸ್ ಕಡ್ಡಾಯ: ವಾಹನ ಸವಾರರು ನೋಡಲೇಬೇಕಾದ ಸ್ಟೋರಿ

Updated on: Feb 27, 2026 | 5:41 PM

ಇದೇ ಏಪ್ರಿಲ್ 1ರಿಂದ ಶೇ.20ರಷ್ಟು ಎಥೆನಾಲ್ (Ethanol )ಮಿಶ್ರಿತ ಪೆಟ್ರೋಲ್ (Petrol) ಮಾರಾಟವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ತೈಲ ಮಾರಾಟ ಕಂಪನಿ ಗಳಿಗೆ ಈ ಕುರಿತು ನಿರ್ದೇಶನ ನೀಡಿದೆ. ಫೆ.17ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಹಾಗಾದ್ರೆ, ಇನ್ಮುಂದೆ ಎಥೆನಾಲ್ ಮಿಶ್ರಣ ಮಾಡುವುದರಿಂದ ಪೆಟ್ರೋಲ್​​ ದರ ಇಳಿಕೆಯಾಗುತ್ತಾ? ಇನ್ನು ಪೆಟ್ರೋಲ್​​​​ಗೆ ಎಥೆನಾಲ್ ಮಿಕ್ಸ್ ಮಾಡುವುದರಿಂದ ವಾಹನಗಳ ಇಂಜಿನ್ ಮೇಲೆ ಪರಿಣಾಮ ಬೀರುತ್ತಾ? ಮಾಹಿತಿ ವಿಡಿಯೋನಲ್ಲಿದೆ.

ನವದೆಹಲಿ, (ಫೆಬ್ರವರಿ 27): ಇದೇ ಏಪ್ರಿಲ್ 1ರಿಂದ ಶೇ.20ರಷ್ಟು ಎಥೆನಾಲ್ (Ethanol )ಮಿಶ್ರಿತ ಪೆಟ್ರೋಲ್ (Petrol) ಮಾರಾಟವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ತೈಲ ಮಾರಾಟ ಕಂಪನಿ ಗಳಿಗೆ ಈ ಕುರಿತು ನಿರ್ದೇಶನ ನೀಡಿದೆ. ಫೆ.17ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಭಾರತೀಯ ಗುಣಮಟ್ಟ ಪ್ರಮಾಣೀಕರಣ ಸಂಸ್ಥೆ ಪ್ರಕಾರ, ತೈಲ ಕಂಪನಿಗಳು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್‌ಗೆ ಸಂಶೋಧನಾ ಆಕ್ಟೇನ್ ಸಂಖ್ಯೆ (ಆರ್‌ಒಎನ್) ಕನಿಷ್ಠ 95 ಮಾನ ದಂಡ ಹೊಂದಿರುವ ಎಥೆನಾಲ್ ಅನ್ನು ಶೇ.20ರಷ್ಟು ಮಿಶ್ರಣ ಮಾಡಿ ಮಾರಾಟ ಮಾಡಬೇಕೆಂದು ನಿರ್ದೇಶಿಸುತ್ತದೆ ಎಂದು ತಿಳಿಸಲಾಗಿದೆ.

ಎಥೆನಾಲ್ ಅನ್ನು ಕಬ್ಬು ಮೆಕ್ಕೆಜೋಳ ಮತ್ತು ಇತರ ಧಾನ್ಯಗಳಿಂದ ತಯಾರಿಸಲಾಗುತ್ತದೆ. ಇದು ಪೆಟ್ರೋಲ್‌ಗಿಂತ ಸ್ವಚ್ಛವಾಗಿ ಉರಿಯುತ್ತದೆ. ಇದನ್ನು ಬಳಕೆ ಮಾಡುವುದರಿಂದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ಎಥನಾಲ್ ಬೆಳೆಗೆ ಉತ್ತೇಜನ ನೀಡಿದಂತಾಗುತ್ತದೆ. ಇದು ರೈತರ ಆದಾಯವನ್ನು ಹೆಚ್ಚಿಸಲೂ ಸಹಕಾರಿ ಎಂದು ಸರ್ಕಾರ ಹೇಳಿದೆ. ಪೆಟ್ರೋಲ್‌ ಗೆ ಎಥೆನಾಲ್ ಸೇರಿಸುವುದರಿಂದ ಇಂಧನ ಹೊರಸೂಸುವಿಕೆ ಕಡಿಮೆಯಾಗುತ್ತದೆ. ಜತೆಗೆ ವಿದೇಶದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣ ಇಳಿಕೆಯಾಗುತ್ತದೆ.ಇದರಿಂದ ಭಾರತಕ್ಕೆ 1.40 ಲಕ್ಷ ಕೋಟಿ ರೂ. ಲಾಭವಾಗಲಿದೆ ಎಂದು ಸರ್ಕಾರ ಹೇಳಿದೆ. ಹಾಗಾದ್ರೆ, ಇನ್ಮುಂದೆ ಎಥೆನಾಲ್ ಮಿಶ್ರಣ ಮಾಡುವುದರಿಂದ ಪೆಟ್ರೋಲ್​​ ದರ ಇಳಿಕೆಯಾಗುತ್ತಾ? ಇನ್ನು ಪೆಟ್ರೋಲ್​​​​ಗೆ ಎಥೆನಾಲ್ ಮಿಕ್ಸ್ ಮಾಡುವುದರಿಂದ ವಾಹನಗಳ ಇಂಜಿನ್ ಮೇಲೆ ಪರಿಣಾಮ ಬೀರುತ್ತಾ? ಮಾಹಿತಿ ವಿಡಿಯೋನಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 27, 2026 05:40 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More