ಮಂಡ್ಯ ರೈತರಿಗೆ ಸಿಗುತ್ತಿಲ್ಲ ಕನ್ಯೆ: ಕಂಕಣ ಭಾಗ್ಯಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ

Edited By: ವಿವೇಕ ಬಿರಾದಾರ

Updated on: Mar 17, 2025 | 9:09 AM

ಮಂಡ್ಯ ಜಿಲ್ಲೆಯ ಅವ್ವೇರಹಳ್ಳಿ ಗ್ರಾಮದ ರೈತ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾಗಿ, 15ಕ್ಕೂ ಹೆಚ್ಚು ಬ್ರಹ್ಮಚಾರಿಗಳು ಮಲೆ ಮಹದೇಶ್ವರನ ಕೃಪೆಗಾಗಿ ಪಾದಯಾತ್ರೆ ಹೊರಟಿದ್ದಾರೆ. ಅವ್ವೇರಹಳ್ಳಿ‌ ಗ್ರಾಮವೊಂದರಲ್ಲೇ 50 ಕ್ಕೂ‌ ಹೆಚ್ಚು ಮಂದಿ ಅವಿವಾಹಿತರಿದ್ದಾರೆ. ಯಾರಿಗೂ ‌ಹೆಣ್ಣು ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದು ರೈತರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಮಂಡ್ಯ, ಮಾರ್ಚ್​ 17: ಬೆಳೆದ ಬೆಳೆಗೂ ಸರಿಯಾದ ಬೆಲೆ ಇಲ್ಲ, ಇತ್ತ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಮಂಡ್ಯ ಜಿಲ್ಲೆಯ ರೈತರ ಮಕ್ಕಳಿಗೆ ಗೋಳು ತಪ್ಪುತ್ತಿಲ್ಲ. ರೈತರು ಎಂಬ ಕಾರಣಕ್ಕೆ ಕನ್ಯೆ ಕೊಡುತ್ತಿಲ್ಲವಂತೆ. ಹೀಗಾಗಿ, ಕಂಕಣ ಭಾಗ್ಯಕ್ಕಾಗಿ ಹೆಣ್ಣು ಸಿಗಲೆಂದು ಹರಕೆಹೊತ್ತು ಮಹದೇಶ್ವರ ಬೆಟ್ಟಕ್ಕೆ ಮಂಡ್ಯ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬ್ರಹ್ಮಚಾರಿಗಳು ಪಾದಯಾತ್ರೆ ಹೊರಟಿದ್ದಾರೆ. 15ಕ್ಕೂ ಹೆಚ್ಚು ಬ್ರಹ್ಮಚಾರಿಗಳು ಪಾದಯಾತ್ರೆ ಮಾಡುತ್ತಿದ್ದಾರೆ. ಅವ್ವೇರಹಳ್ಳಿ‌ ಗ್ರಾಮವೊಂದರಲ್ಲೇ 50 ಕ್ಕೂ‌ ಹೆಚ್ಚು ಮಂದಿ ಅವಿವಾಹಿತರಿದ್ದಾರೆ. ಯಾರಿಗೂ ‌ಹೆಣ್ಣು ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮಲೆ ಮಹದೇಶ್ವರನ ಕೃಪೆಗಾಗಿ ಪಾದಯಾತ್ರೆ ಹೊರಟಿದ್ದಾರೆ.

Loading...
Unable to load recommendations.
Follow Us
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More