ಮಂಡ್ಯ ದಿವ್ಯ ಅತ್ಯಾಚಾರ, ಕೊಲೆ: ಕಣ್ಣೀರಿಡುತ್ತ ನ್ಯಾಯ ಕೊಡಿಸುವಂತೆ ಸಿಎಂಗೆ ಮನವಿ ಮಾಡಿದ ಸುಮಲತಾ
ಸಂಸದೆ ಸುಮತಾ ಅಂಬರೀಶ್​

ಮಂಡ್ಯ ದಿವ್ಯ ಅತ್ಯಾಚಾರ, ಕೊಲೆ: ಕಣ್ಣೀರಿಡುತ್ತ ನ್ಯಾಯ ಕೊಡಿಸುವಂತೆ ಸಿಎಂಗೆ ಮನವಿ ಮಾಡಿದ ಸುಮಲತಾ

| Updated By: ವಿವೇಕ ಬಿರಾದಾರ

Updated on: Oct 16, 2022 | 6:53 PM

ಮಳವಳ್ಳಿಯ ಬಾಲಕಿ ದಿವ್ಯ ಅತ್ಯಾಚರ ಮತ್ತು ಕೊಲೆ ಪ್ರರಣದಲ್ಲಿ ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು ಎಂದು ಸಂಸದೆ ಸುಮಲತಾ ಅಂಬರೀಶ್​ ಕಣ್ಣೀರು ಹಾಕಿದ್ದಾರೆ.

ಮಂಡ್ಯ ಜಿಲ್ಲೆ ಕೆ ಆರ್​ ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಇಂದು (ಅ.16) ನಡೆದ ಮಹಾಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಸಂಸದೆ ಸುಮಲತಾ ಅಂಬರೀಶ್​ ಕಣ್ಣೀರು ಹಾಕಿದ್ದಾರೆ. ಮಳವಳ್ಳಿಯ ಬಾಲಕಿ ದಿವ್ಯ ಅತ್ಯಾಚರ ಮತ್ತು ಕೊಲೆ ಪ್ರರಣದಲ್ಲಿ ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು. ಮಗುವಿನ ಪೋಷಕರ ನೋವು ಯಾರು ಭರಿಸಲು ಆಗಲ್ಲ. ಪೋಕ್ಸೋ ಅಥವಾ ಯಾವುದಾದರೂ ಸೆಕ್ಷನ್ ಹಾಕಿ. ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ಕಠಿಣ ಶಿಕ್ಷೆ ವಿಧಿಸುವ ಜವಾಬ್ದಾರಿ ಸಿಎಂ ಹೊತ್ತು ಕೊಳ್ಳಬೇಕು ಎಂದು ಗದ್ಗದಿತರಾಗಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.