Ramya: ಲಕ್ಕಿ ಅಭಿಮಾನಿಗಳನ್ನು ವೇದಿಕೆಗೆ ಕರೆದು ಪ್ರೀತಿಯಿಂದ ತಬ್ಬಿಕೊಂಡ​ ರಮ್ಯಾ; ವಿಡಿಯೋ ನೋಡಿ

Ramya: ಲಕ್ಕಿ ಅಭಿಮಾನಿಗಳನ್ನು ವೇದಿಕೆಗೆ ಕರೆದು ಪ್ರೀತಿಯಿಂದ ತಬ್ಬಿಕೊಂಡ​ ರಮ್ಯಾ; ವಿಡಿಯೋ ನೋಡಿ

TV9 Web
| Updated By: ಮದನ್​ ಕುಮಾರ್​

Updated on:Oct 17, 2022 | 8:30 AM

Head Bush Pre-release event: ದಾವಣಗೆರೆಯಲ್ಲಿ ನಡೆದ ‘ಹೆಡ್​ ಬುಷ್​’ ಚಿತ್ರದ ಪ್ರೀ ರಿಲೀಸ್​ ಇವೆಂಟ್​ನಲ್ಲಿ ರಮ್ಯಾ ಭಾಗವಹಿಸಿದ್ದರು. ನೆಚ್ಚಿನ ನಟಿಯನ್ನು ನೋಡಿ ದಾವಣಗೆರೆಯಲ್ಲಿನ ಅಭಿಮಾನಿಗಳು ಸಂಭ್ರಮಿಸಿದರು.

ನಟಿ ರಮ್ಯಾ (Ramya Divya Spandana) ಅವರು ಸಿನಿಮಾದಲ್ಲಿ ಬಣ್ಣದ ಹಚ್ಚದೇ ಹಲವು ವರ್ಷ ಕಳೆದಿವೆ. ಹಾಗಿದ್ದರೂ ಅವರ ಮೇಲೆ ಜನರು ಇಟ್ಟುಕೊಂಡಿರುವ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ಅವರು ಹೋದಲ್ಲೆಲ್ಲ ಜನರು ಮುತ್ತಿಕೊಳ್ಳುತ್ತಾರೆ. ಭಾನುವಾರ (ಅ.16) ದಾವಣಗೆರೆಯಲ್ಲಿ ನಡೆದ ‘ಹೆಡ್​ ಬುಷ್​’ (Head Bush) ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ನಲ್ಲಿ ರಮ್ಯಾ ಭಾಗವಹಿಸಿದ್ದರು. ಈ ವೇಳೆ ಇಬ್ಬರು ಲಕ್ಕಿ ಅಭಿಮಾನಿಗಳನ್ನು ವೇದಿಕೆಗೆ ಕರೆದು ಅವರು ಪ್ರೀತಿಯಿಂದ ತಬ್ಬಿಕೊಂಡರು. ಅಲ್ಲದೇ, ಸೆಲ್ಫಿ ನೀಡಿ ಖುಷಿಪಡಿಸಿದರು. ನೆಚ್ಚಿನ ನಟಿಯನ್ನು ನೋಡಿ ದಾವಣಗೆರೆಯಲ್ಲಿನ (Davanagere) ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Oct 17, 2022 08:30 AM