ಮಂಡ್ಯದಲ್ಲಿ ಭಾವೈಕ್ಯತೆಯ ಗಣೇಶೋತ್ಸವ: ನೈವೇದ್ಯ ಅರ್ಪಿಸಿ ಗಣಪನಿಗೆ ಪೂಜೆ ಸಲ್ಲಿಸಿದ ಮುಸ್ಲಿಮರು
ಮದ್ದೂರು ಗಣೇಶೋತ್ಸವದ ಸಂದರ್ಭ ನಡೆದ ಕಲ್ಲುತೂರಾಟದಿಂದ ಮಂಡ್ಯ ಜಿಲ್ಲೆಯಲ್ಲಿ ಕೋಮು ಉದ್ವಿಗ್ನ ವಾತಾವರಣ ನಿರ್ಮಾಣ ಆಗಿದ್ದರೆ, ಇದೀಗ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಮುಸ್ಲಿಮರೂ ಗಣೇಶೋತ್ಸವದಲ್ಲಿ ಕೈಜೋಡಿಸಿದ್ದಾರೆ. ಅಷ್ಟೇ ಅಲ್ಲದೆ, ಗಣೇಶನಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ. ವಿಡಿಯೋ ಇಲ್ಲಿದೆ.
ಮಂಡ್ಯ, ಸೆಪ್ಟೆಂಬರ್ 18: ಮದ್ದೂರು ಗಲಾಟೆಯಿಂದ ಕೋಮು ದಳ್ಳುರಿಗೆ ಕಾರಣವಾಗಿದ್ದ ಮಂಡ್ಯ ಜಿಲ್ಲೆ ಇದೀಗ ಕೋಮು ಸೌಹಾರ್ದತೆ ಮೆರೆಯುವ ಮೂಲಕ ಗಮನ ಸೆಳೆದಿದೆ. ಜಿಲ್ಲೆಯ ಹರಿಹರಪುರ ಗ್ರಾಮದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಜತೆಗೂಡಿ ಗಣೇಶೋತ್ಸವ ಆಚರಿಸಿದ್ದಾರೆ. ಮುಸ್ಲಿಮರು ಸಹ ಗಣಪನಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ. ವಿಡಿಯೋ ಇಲ್ಲಿದೆ.
