‘10 ಗುಂಟೆ ಜಾಗ ಕೊಡಿ ಪ್ಲೀಸ್’; ವಿಷ್ಣು ಬರ್ತ್ಡೇ ದಿನ ಅಭಿಮಾನಿಗಳ ಕೋರಿಕೆ
ವಿಷ್ಣುವರ್ಧನ್ ಅವರ ಸಮಾಧಿ ವಿಚಾರ ವಿವಾದದ ಕೇಂದ್ರ ಬಿಂದು ಆಗಿದೆ. ಅಭಿಮಾನ್ ಸ್ಟುಡಿಯೋದಲ್ಲಿರೋ 10 ಗುಂಟೆ ಜಾಗಕ್ಕೆ ಬೇಡಿಕೆ ಇಡಲಾಗುತ್ತಿದೆ. ಹೀಗಿರುವಾಗಲೇ ಅಭಿಮಾನಿಗಳು ವಿಷ್ಣು ಬಗ್ಗೆ ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ. 10 ಗುಂಟೆ ಜಾಗಬೇಕು ಎಂದು ಪಟ್ಟು ಹಿಡಿಯುತ್ತಾ ಇದ್ದಾರೆ .
ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆದ ಜಾಗ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಇದೆ. ಇಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಅಭಿಮಾನಿಗಳು ಈ ಬಗ್ಗೆ ಬೇಸರ ಹೊರಹಾಕಿದ್ದಾರೆ. ಪ್ರತ್ಯೇಕ ಜಾಗದಲ್ಲಿ ವಿಷ್ಣು ಬರ್ತ್ಡೇ ಆಚರಿಸಲಾಗುತ್ತಿದೆ. ಈ ವೇಳೆ ಮಾತನಾಡಿದ ಫ್ಯಾನ್ಸ್, ‘ವಿಷ್ಣು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಪ್ರಶಸ್ತಿ ಮುಖ್ಯವಲ್ಲ. ಪ್ರಶಸ್ತಿ ಹುಡುಕಿ ತಾವಾಗೇ ಹೋದವರಲ್ಲ. 10 ಗುಂಟೆ ಜಾಗ ಬೇಕು, ಸರ್ಕಾರ ಅದನ್ನು ಕೊಡಿಸಬೇಕು’ ಎಂದು ಆಗ್ರಹಿಸಿದ್ದಾರೆ ಅಭಿಮಾನಿಗಳು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 18, 2025 12:20 PM

